Thursday, December 9, 2021

Wonderful story of Sannati: Interview of Prof S Settar

 

ಸನ್ನತಿಯ ಅದ್ಭುತ ಕಥೆ: ಪ್ರೊ. ಷಡಕ್ಷರ ಶೆಟ್ಟರ ಅವರೊಂದಿಗೆ ಸಂಭಾಷಣೆ

 ಶಿವಾನಂದ ಕಣವಿ

 

ಫ಼ೆಬ್ರುಅರಿ ೨೮೨೦೨೦ ರಂದು ಹಿರಿಯ ಇತಿಹಾಸಕಾರ ಪ್ರೊ ಶೆಟ್ಟರ ಅವರು ನಮ್ಮನ್ನು ಅಗಲಿ ಹೋದರು. ಅವರೊಡನೆ ಜನೆವರಿ ೨೨ ರ ಸಂಜೆಧಾರವಾಡದಲ್ಲಿಇತಿಹಾಸಕಾರ ಪ್ರೊ ರವಿ ಕೋರಿಶೆಟ್ಟರ ಅವರ ಮನೆಯಲ್ಲಿ ಮಾಡಿದ ನನ್ನ ಕೊನೆಯ ಸಂಭಾಷಣೆ ಈ ಕೆಳಗೆ. 

ಎಲ್ಲೆಡೆಯೂ ಕುತೂಹಲ ಹುಟ್ಟಿಸಿದ ಕಲಬುರ್ಗಿಯ ಹತ್ತಿರದ ಸನ್ನತಿಯಲ್ಲಿ ನಡೆದ ಉತ್ಖನನ ಮತ್ತು ಬೆಳಕಿಗೆ ಬಂದ ಬೆರೆಗುಗೊಳಿಸುವ ಪ್ರಾಚೀನ ಬೌದ್ಧ ಅವಶೇಷಗಳನ್ನು ಕುರಿತು ಹೆಚ್ಚು ತಿಳಿದುಕೊಳ್ಳುವ ಉತ್ಸಾಹದಿಂದ ನಾನವರ ಜೊತೆ ಮಾತನಾಡಿದೆ.

 


Rare family portrait of Raya Piyadasi Asoka at Sannati / Kanaganahalli stupa

ಶಿವಾನಂದ ಕಣವಿ: ಸನ್ನತಿಯ ಉತ್ಖನನದ ಬಗ್ಗೆ ವಿವರವಾದ ವಿಶ್ಲೇಷಣೆ ಮತ್ತು ಅದರ ಪ್ರಾಮುಖ್ಯತೆ ಕಾಲದಆಂಧ್ರ ಮತ್ತು ಕರ್ನಾಟಕದ ಪ್ರದೇಶದ ಬಗೆಗೆ ನನಗೆ ಕುತೂಹಲ. ನೀವು ಇದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೀರಿ, ಅಲ್ಲಿಯ ಶಾಸನಗಳನ್ನು ಓದಿದ್ದೀರಿಆದ್ದರಿಂದ ಸನ್ನತಿಯ ಕಾಲಮಾನ ಮತ್ತು ಪ್ರಾಮುಖ್ಯತೆಯ ಬಗೆಗೆ ಮಾತನಾಡೋಣ. 

 

ಷಡಕ್ಷರ ಶೆಟ್ಟರ:  ಇದರ ಕಾಲಮಾನ ಬಹುಶಃ ಕ್ರಿ. ಪೂ. ೩ ನೆಯ ಶತಮಾನ ಮತ್ತು ಇದನ್ನು ಸ್ಥಾಪನೆ ಮಾಡಿದವ ಚಕ್ರವರ್ತಿ ಅಶೋಕ ಮೌರ್ಯ ಎಂದು  ಸಂಶಯಿಸಲಾಗಿದೆ. ಆದರೆ  ಬಗ್ಗೆ ಸ್ಪಷ್ಟವಾದ ಕುರುಹು ಸಿಕ್ಕಿಲ್ಲ. ಆದರೂ ಕೂಡ  ಪ್ರದೇಶದಲ್ಲಿ ಅಶೋಕನ ವಿಶಿಷ್ಟವಾದ ಶಾಸನವೊಂದಿದೆ ಶಾಸನವು ಭೀಮಾ ನದಿ ದಡದಲ್ಲಿ ಸಿಕ್ಕಿದೆಅಶೋಕ ಬರೆಸಿದ  ವಿಶಿಷ್ಟ ಶಾಸನ ಮತ್ತು ಸ್ತೂಪ ಒಂದೇ ಕಡೆ ಇರುವುದರಿಂದಮೂಲ  ಸ್ತೂಪ ಅಶೋಕನ ಕಾಲದ್ದು ಎಂದು ವಾದ ಮಾಡುವುದಕ್ಕೆ ಅನುಕೂಲಕರವಾಗಿದೆ. ಆದರೆಅಶೋಕ ಸ್ಥಾಪನೆ ಮಾಡಿದ ಸ್ತೂಪ ಇದಲ್ಲಸಾಮಾನ್ಯವಾಗಿ ಮಣ್ಣಿನ ದಿನ್ನೆಯನ್ನ ಮಾಡಿ ಕಾಲದ ರೀತಿಯಲ್ಲಿ ಸ್ತೂಪಗಳನ್ನು ಅಶೋಕ ನಿರ್ಮಾಣ ಮಾಡುತ್ತಿದ್ದಆದರೆಈಗ ಸಿಕ್ಕಿರುವ ಸ್ತೂಪ ನಂತರದ ಶಾತವಾಹನರ ಕಾಲದಲ್ಲಿ ನಿರ್ಮಿಸಿದ ಬಹಳ ಭವ್ಯವಾದಸುಂದರವಾದ ಸ್ತೂಪವಾಗಿದೆಪ್ರಮಾಣದಲ್ಲಿ ಅಮರಾವತಿ (ಆಂಧ್ರ) ಸ್ತೂಪದಂತೆ ದೊಡ್ಡದಿಲ್ಲದಿದ್ದರೂ ವಾಸ್ತುಶಿಲ್ಪದ ಸೌಂದರ್ಯದಲ್ಲಿ ಅದಕ್ಕಿಂತ ಕಡಿಮೆ ಇಲ್ಲ ಎನ್ನುವುದು ಮತ್ತೊಂದು ಗಮನಾರ್ಹ ವಿಷಯ.

ಅಶೋಕನ ಕಾಲದಿಂದ ಹಿಡಿದು ಶಾತವಾಹನರ ಕಾಲದ ಅಂತ್ಯದವರೆಗೂಸುಮಾರು ಐದು ನೂರು ವರ್ಷಗಳ ಕಾಲದವೆರೆಗೆ ಅವನು ಕಟ್ಟಿಸಿದ ಸ್ತೂಪ ಇತ್ತು ಎಂಬುದಕ್ಕೆ ಕುರುಹುಗಳು ಸಿಗುತ್ತವೆಆದರೆ ಶಾತವಾಹನರ ಕಾಲದ ನಂತರ ಇದು ನೈಸರ್ಗಿಕವಾಗಿಯೇ ಬಿದ್ದುಹೋಗಿದೆಮೇಲ್ಭಾಗದಿಂದ ಯಾವುದೋ ಒತ್ತಡ ಹೆಚ್ಚಾಗಿಭೂಮಿ ಬಿರುಕಾಗಿ ಇಡೀ ಸ್ತೂಪ ಮಣ್ಣಿನೊಳಗೆ ಕುಸಿದುಬಿದ್ದಿದೆಹೀಗೆ ಬಿದ್ದ ಪರಿಣಾಮ ಅದರ ಸುಂದರವಾದ ಮೂರ್ತಿಗಳು ಮಣ್ಣಿನೊಳಗೆ ಸಿಕ್ಕಿಕೊಂಡು ಹಾಗೆಯೇ ಸುರಕ್ಷಿತವಾಗಿವೆಅವುಗಳಿಗೆ ಯಾವುದೇ ಅನಾಹುತಗಳಾಗಲಿಲ್ಲ.

ಕರ್ನಾಟಕದಲ್ಲಿರುವ ಏಕೈಕ ಸ್ತೂಪ ಇದುಆಂಧ್ರ ಪ್ರದೇಶದಲ್ಲಿ ನೂರಾರು ಸ್ತೂಪಗಳು ಸಿಕ್ಕಿವೆಸುಮಾರು ಎಪ್ಪತ್ತು-ಎಂಬತ್ತು ಭೌದ್ಧ ಕೇಂದ್ರ ಗಳು ಸಹ ಸಿಕ್ಕಿವೆಆಂಧ್ರದಲ್ಲಿ ಅತ್ಯಂತ ಪ್ರಖ್ಯಾತಿ ಪಡೆದಿರುವ ಸ್ತೂಪಗಳ ಸ್ಥಾನಗಳೆಂದರೆ ಅಮರಾವತಿಜಗ್ಗಯ್ಯಪೇಟಗಂಟಸಾಲಬಟ್ಟಿಪರೋಲುನಾಗಾರ್ಜುನಕೊಂಡ ಆಗಿವೆನಾಗಾರ್ಜುನಕೊಂಡ ಒಂದರಲ್ಲಿಯೇ ಸಾಕಷ್ಟು ಸ್ತೂಪಗಳು ಸಿಕ್ಕಿವೆಆದರೆ ಕರ್ನಾಟಕದಲ್ಲಿ ಇಲ್ಲಿಯವರೆಗೂ ಒಂದೂ ಸ್ತೂಪ ಸಿಕ್ಕಿರಲಿಲ್ಲಈಗ ಕನಗನಹಌಯಲ್ಲಿ ಸಿಕ್ಕಿದೆ.

 

ಶಿವಾನಂದ ಕಣವಿ: ಅಶೋಕನ ಕುಟುಂಬದ ಶಿಲ್ಪ ಸಿಕ್ಕಿದೆಯೆಲ್ಲಾ ಅದು ಸಮಕಾಲೀನದ್ದಾ ಅಥವಾ ನಂತರದ್ದಾ?

ಷಡಕ್ಷರ ಶೆಟ್ಟರ:  ಅದು ಅಶೋಕನ ಮೂಲದಿಂದ ಬಂದದ್ದು ಎಂದು ನಂತರದ ಅರಸು ಮನೆತನದವರು ಅಶೋಕ ನೆನಪಿಗಾಗಿ ಅವುಗಳನ್ನು ಮಾಡಿಸಿದ್ದುಎರಡು ಪ್ಯಾನೆಲ್ ಶಿಲ್ಪಗಳು ಸಿಕ್ಕಿವೆಒಂದು ಅಶೋಕ ಮತ್ತು ಆತನ ಹೆಂಡತಿ ಇರುವುದುಮತ್ತೊಂದು ಅಶೋಕ ಯಾವುದೋ ಕೆಲಸ ಮಾಡುತ್ತಿರುವುದುಇದಲ್ಲದೇ ಶಾತವಾಹನರ ಅರಸರ ಅರ್ಧ ಡಜನ್ಗೂ ಹೆಚ್ಚು ಶಿಲ್ಪಗಳೂ ಸಿಕ್ಕಿವೆಇದು ಯಾಕೆ ಮಹತ್ವದ ವಿಚಾರ ಎಂದರೆನಮ್ಮ ದೇಶದಲ್ಲಿ ವ್ಯಕ್ತಿ ಚಿತ್ರವುಳ್ಳ ಶಿಲ್ಪಗಳ ಸಂಸ್ಕೃತಿ, ಪೋರ್ಟ್ರೇಟ ಕಲ್ಚರ್ ಮೊದಲು ಬಂದಿದ್ದೇ ಇಲ್ಲಿಇದಕ್ಕಾಗಿಯೂ ಸನ್ನತಿ ಪ್ರದೇಶ ಹೆಚ್ಚು ಮಹತ್ವ ಪಡೆದಿದೆ.

 

ಶಿವಾನಂದ ಕಣವಿ:  ಅಶೋಕನ ಕಾಲದಲ್ಲಿ ಇದು ಮುಖ್ಯವಾದ ಸ್ಥಳಅದರಲ್ಲಿಯೂ  ಪ್ರಮುಖವಾಗಿ ದಕ್ಷಿಣ ಭಾಗದ ಆಡಳಿತಕ್ಕೆವ್ಯವಹಾರಗಳಿಗೆ ಇದು ಪ್ರಧಾನವಾದ ಸ್ಥಳವಲ್ಲವೇ?

ಷಡಕ್ಷರ ಶೆಟ್ಟರ:  ಅಶೋಕನ ಕಾಲದಲ್ಲಿ ಕರ್ನಾಟಕ ಪ್ರದೇಶ ಬಹಳ ಮುಖ್ಯವಾದ ಪ್ರದೇಶವಾಗಿತ್ತುಏಕೆಂದರೆಅಶೋಕನ ಶೇ.50 ರಷ್ಟು ಮಹತ್ವದ ಶಾಸನಗಳು ಕರ್ನಾಟಕದಲ್ಲಿಯೇ ಸಿಕ್ಕಿವೆದೇಶದಲ್ಲೆಲ್ಲಾ ಒಂಬತ್ತು ಶಾಸನಗಳು ಸಿಕ್ಕರೆನಮ್ಮಲ್ಲಿಯೇ ಒಂಬತ್ತು ಸಿಕ್ಕಿವೆಹಾಗಾಗಿಪುರಾತನ ಕಾಲದಲ್ಲಿಯೇ ಕರ್ನಾಟಕ ಪ್ರದೇಶ ಬಹಳ ಪ್ರಾಮುಖ್ಯತೆ ಪಡೆದಿತ್ತು ಅಂತ ಹೇಳಬಹುದುಆಗ ಕರ್ನಾಟಕ ಎಂಬ ಕಲ್ಪನೆ ಇರಲಿಕ್ಕಿಲ್ಲಆದರೆ  ಪ್ರದೇಶ ಅಷ್ಟೊಂದು ಪ್ರಮುಖ್ಯತೆ ಪಡೆದಿತ್ತುಅಶೋಕನ ನಂತರ ಆಂಧ್ರ ಪ್ರದೇಶಕ್ಕೆ ಹೆಚ್ಚು ಒತ್ತು ಕೊಡಲಾಗುತ್ತೆಬೌದ್ಧ ಧರ್ಮ ಹೆಚ್ಚು ಪ್ರಸಾರವಾಗಿದ್ದು ಆಂಧ್ರ ಪ್ರದೇಶದಲ್ಲಿನಮ್ಮಲ್ಲಿ ಆಗುವುದಿಲ್ಲಏತಕ್ಕೆ ಆಗುವುದಿಲ್ಲ ಎಂಬುದು ಬೇರೆ ಪ್ರಶ್ನೆ

 

ಶಿವಾನಂದ ಕಣವಿ: ಇದರಿಂದ ಶಾತವಾಹನರ ಕಾಲದಲ್ಲಿ  ಸ್ತೂಪಗಳು ಬಂದವು ಅನ್ನಬಹುದು. ಇದರಿಂದ ಶಾತವಾಹನರೂ ಸಹ ಬೌದ್ಧರಾಗಿದ್ದರು ಎಂಬ ನಿರ್ಣಯಕ್ಕೇನಾದರೂ ಬರಬಹುದಾ?

ಷಡಕ್ಷರ ಶೆಟ್ಟರ:  ಅರಸರ ಧರ್ಮದ ಬಗ್ಗೆ ಹೇಳುವುದು ಕಷ್ಟವಿಶೇಷವಾಗಿ ಆಗ ಶಾತವಾಹನರ ಕಾಲದಲ್ಲಿ ಭೌದ್ಧ ಧರ್ಮದ ಪ್ರಸಾರ ಇದ್ದ ಕಾರಣಕ್ಕಾಗಿ ಇದಕ್ಕೆ ಅವರು ಪ್ರೋತ್ಸಾಹ ಕೊಟ್ಟರುಆದರೆ ಶಾತವಾಹನರ ಅರಸರಿಂದಲೇ ಇದು ನಿರ್ಮಾಣ ಆಗಿತ್ತು ಎಂಬ ಸೂಚನೆಗಳಿಲ್ಲಒಂದು ಸ್ತೂಪ ನಿರ್ಮಾಣ ಆಗುವುದಕ್ಕೆ ಅರಸರು ಬೇಕಾಗಿದ್ದರುಅರಸರಿಲ್ಲದೆ ನಿರ್ಮಾಣವಾದ ಸ್ತೂಪಗಳು ಇಲ್ಲಗುಹಾಲಯಗಳನ್ನು ಕೆತ್ತಿಸಿದ ವಿಷಯದಲ್ಲಿ ಅರಸರ ಪಾತ್ರಗಳನ್ನು ನಾವು ನೋಡುತ್ತೇವೆನಾಸಿಕ,ಭಾಜೇಕಾರ್ಲಾ ಅಲ್ಲೆಲ್ಲಾ ಅರಸರೇ ಮಾಡಿದ್ದಾರೆವ್ಯಾಪಾರಿಗಳುಭಕ್ತರು ಸಹ ಸ್ತೂಪ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ ಸ್ತೂಪಗಳನ್ನು ಕಟ್ಟುವಾಗ ವ್ಯಯಕ್ತಿಕವಾಗಿ ಕೆಲವರು ನೆರವಾಗಿದ್ದುಒಂದೊಂದು ಕಂಬ ಒಬ್ಬೊಬ್ಬರು ಕೊಟ್ಟು ಶಾಸನಗಳನ್ನು ಬರೆಸಿದ್ದಾರೆಇದನ್ನು ಅಲ್ಲಗಳೆಯಕ್ಕೆ ಆಗುವುದಿಲ್ಲ

 

ಶಿವಾನಂದ ಕಣವಿ: ಸನ್ನತ್ತಿಯಲ್ಲಿ ಕೆಲವು ಪ್ರಾಕೃತ ಶಾಸನಗಳು ಸಿಕ್ಕಿವೆ ಅಂತಾರಲ್ಲಇದರಿಂದ ನಾವು ಏನೇನು ಕಲಿಯಬಹುದುಏನು ಮಾಹಿತಿ ಸಿಗುತ್ತೆ.

ಷಡಕ್ಷರ ಶೆಟ್ಟರ:  ಇದೇ ಪ್ರದೇಶದಲ್ಲಿ ಸುಮಾರು ಮುನ್ನೂರು ಶಾಸನಗಳು ಸಿಕ್ಕಿವೆಇದರಿಂದ ಅದ್ಭುತವಾದ ಮಾಹಿತಿ ಸಿಗುತ್ತೆಅಮರಾವತಿ ಸ್ತೂಪದಲ್ಲಿ ಸುಮಾರು ಮುನ್ನೂರು ಶಾಸನಗಳು ಸಿಕ್ಕಿದ್ದವುಇದಾದ ನಂತರ ಪ್ರದೇಶದಲ್ಲಿ ಮತ್ತೆ ಮುನ್ನೂರು ಶಾಸನಗಳು ಸಿಕ್ಕಿವೆಎಲ್ಲವೂ ತುಂಡು ಶಾಸನಗಳೇಅವು ಏನು ಹೇಳುತ್ತವೆ ಅನ್ನುವುದಾದರೆಒಂದೊಂದು ಶಾಸನ ಸ್ತೂಪದ ಭಾಗಗಳನ್ನು ಯಾರಾರು ದತ್ತಿದಾನ ಕೊಟ್ಟರು ಎಂಬ ಹಿನ್ನೆಲೆ ಮಾಹಿತಿ ಕೊಡುತ್ತವೆದಾನ ಕೊಟ್ಟವರು ಬಿಕ್ಷುಬಿಕ್ಷುಣಿ ಯಾಗಿದ್ದರಾಅಥವಾ ಜನಸಾಮಾನ್ಯರಾಗಿದ್ದರಾ ಅಥವಾ ವ್ಯವಸಾಯಸ್ತರಾಗಿದ್ದರಾ ಎಂಬ ಮಾಹಿತಿ ಬಗ್ಗೆ ಇವು ಬೆಳಕು ಚೆಲ್ಲುತ್ತವೆ. ನನಗೆ ಅತ್ಯಂತ ಕುತೂಹಲ ಮೂಡಿಸಿದ ಮತ್ತೊಂದು ವಿಚಾರವೆಂದರೆಆರಂಭದ ಕಾಲದ ಭಾಷೆಅದರಲ್ಲಿಯೂ ವಾಸ್ತುಶಿಲ್ಪದ ಶಬ್ಧ ಸಂಪತ್ತು ಆರ್ಕಿಟೆಕ್ಚುರಲ್ ವೊಕ್ಯಾಬುಲರಿಬೇರೆ ಸ್ತೂಪಕ್ಕೆ ಹೋಲಿಸಿದರೆ  ಸ್ತೂಪದ್ದು ಹೆಚ್ಚು ವೈವಿದ್ಯಮಯವಾಗಿದೆಉದಾಹರಣಗೆ ಹೇಳುವುದಾದರೆಸ್ತೂಪದ ಸುತ್ತಲೂ ಇರುವ ಪ್ರದಕ್ಷಣ ಪಥಇಲ್ಲಿರುವ ಸ್ತಂಭಗಳನ್ನು ಎಲ್ಲಾ ಕಡೆ ಸಾಮಾನ್ಯವಾಗಿ ಕಂಬಸ್ತಂಭ ಅಂತ ಕರೆಯುತ್ತಾರೆಆದರೆ ಇಲ್ಲಿ ಇವುಗಳನ್ನು ಪಾಯಕ ಎನ್ನುವ ಶಬ್ಧವನ್ನು ಬಳಸಲಾಗಿದೆ ಪಾಯಕ ಎನ್ನುವ ಶಬ್ಧ ಬೇರೆಲ್ಲಿಯೂ ಬಳಕೆಯಾಗಿಲ್ಲಹೀಗೆ ಅನೇಕ ವಾಸ್ತುಶಿಲ್ಪದ ಪದಗಳು ಇಲ್ಲಿ ವೈವಿದ್ಯಮಯವಾಗಿವೆಇದಷ್ಟೇ ಅಲ್ಲ ಸ್ತೂಪದ ವಿನ್ಯಾಸವನ್ನು ಸಹ ಬದಲಾವಣೆ ಮಾಡಿಕೊಳ್ಳಲಾಗಿದೆಯಾವ ಸ್ತೂಪದಲ್ಲಿಯೂ ಕಾಣದ ಕೆಲವು ವಿಶೇಷತೆಗಳನ್ನು ಇಲ್ಲಿ ಕಾಣಬಹುದುಇದುವರೆಗೂ ಪೋಟ್ರೇಟ್ ಶಿಲ್ಪಗಳ ಬಗ್ಗೆ ಚರ್ಚೆ ಮಾಡಿದ್ವಿಇದನ್ನ ಪಕ್ಕಕ್ಕಿಟ್ಟುಸಾಂಚಿ ಸ್ತೂಪದಲ್ಲಿರದ ವಿಶೇಷತೆ ಇಲ್ಲೇನಿದೆ ಎಂದರೆಪೂಜೆಯಲ್ಲಿ ಭಕ್ತರು ಹೋಗಿ ಪುಷ್ಪಗಳನ್ನು ಚಿಮ್ಮುವಾಗ ಎಲ್ಲಾ ಪುಷ್ಪಗಳು ಒಂದೆಡೆ ಸಂಗ್ರಹವಾಗಲು ಪುಷ್ಪ ಪಟಿಕೆಗಳನ್ನು ಮಾಡಲಾಗಿದೆಬೇರೆಲ್ಲಿಯೂ  ವಿಶೇಷತೆ ಇಲ್ಲಸ್ತೂಪದ ಸುತ್ತಲೂ ನೂರಾರು ಪಟಿಕೆಗಳನ್ನು ನಿರ್ಮಿಸಲಾಗಿದೆ.  ಪಟಿಕೆ ಅಂದರೆ ಬಾನಿಯ ಆಕಾರದಲ್ಲಿದ್ದುಬಿದ್ದ ಪುಷ್ಪಗಳು ನೇರವಾಗಿ ಬಂದು ಪಟಿಕೆಗಳಲ್ಲಿ ಶೇಖರವಾಗುತ್ತವೆಇದಲ್ಲದೆ ಮಳೆ ಬಂದಾಗ ಸ್ತೂಪದ ಮೇಲೆ ಬಿದ್ದ ಮಳೆಯ ನೀರು ಸಂಗ್ರಹವಾಗಿ ಹೊರ ಹೋಗಲು ಸಹ ಇವು ಅನುಕೂಲಕರವಾಗಿವೆ ಪುಷ್ಪ ಪಟಿಕೆಗಳು ಬಹಳ ವಿಶೇಷವಾದ ಅಂಶಇತರೆ ಸ್ತೂಪಗಳಲ್ಲಿ ಐದು ಸ್ತಂಭಗಳಿದ್ದರೆ ಇಲ್ಲಿ ನಾಲ್ಕು ಸ್ತಂಭಗಳಿವೆಇವು ಏನು ಸೂಚಿಸುತ್ತವೆ ಎಂದರೆಬುದ್ಧನ ಜನ್ಮಅವನ ನಿವೃತ್ತಿಅವನ ಜ್ಞಾನೋದಯ ಮತ್ತು ಅವನ ಸಾವು ನಾಲ್ಕು ಘಟಕಗಳನ್ನು ಸೂಚಿಸುತ್ತವೆಇಲ್ಲಿ ಮತ್ತೊಂದು ವಿಶೇಷವೇನೆಂದರೆಎರಡನೇ ಹಂತದಲ್ಲಿ ಸ್ತೂಪದ ಸುತ್ತಲೂ ಕಲ್ಲಿನ ಪಟಗಳನ್ನು ಬಿಟ್ಟಿದ್ದಾರೆಸುಮಾರು ಆರಡಿಗಿಂತ ಎತ್ತರದ  ಪಟಗಳಲ್ಲಿ ಸುಂದರವಾದ ಜಾತಕ ಕತೆಗಳನ್ನು ಶಿಲ್ಪಗಳಲ್ಲಿ ಮಾಡಿಅದಕ್ಕೆ ಮೆತ್ತಿದ್ದಾರೆಅನೇಕ ಜಾತಕ ಕತೆಗಳು ಇಲ್ಲಿವೆ ರೀತಿಯ ಜಾತಕ ಕತೆಗಳುಆಮರಾವತಿಸಾಂಚಿ ಸ್ತೂಪದಲ್ಲಿಲ್ಲಸಾಂಚಿಯಲ್ಲಂತು ದೊಡ್ಡ ಹೆಬ್ಬಾಗಿಲುತೋರಣ ಬಿಟ್ಟರೆ ಶಿಲ್ಪಗಳೇ ಇಲ್ಲಸಾರಾನಾಥ್ನಲ್ಲಿಯೂ ಸಹ ಇಲ್ಲಭೌರತ್ ಅಶೋಕನ ಕಾಲದ್ದಾಗಿದ್ದು ಇಲ್ಲಿ ಶಿಲ್ಪಗಳಷ್ಟೇ ಅಲ್ಲಇಲ್ಲೇನಿತ್ತು ಎಂಬ ಕುರುಹು ಸಹ ಇಲ್ಲದ ಹಾಗೆ ಎಲ್ಲವೂ ಲೂಟಿ ಮಾಡಿಬಿಟ್ಟಿದ್ದಾರೆಅಲ್ಲೂ ಜಾತಕ ಕತೆಗಳು ಹೊರಗಡೆಗೆ ಅಂದರೆ ಪ್ರದಕ್ಷಣ ಪಥದ ಒಳಭಾಗದಲ್ಲಿ  ಜಾತಕ ಕತೆಗಳನ್ನು ಕೆತ್ತಲಾಗಿದೆಜನರು ಪ್ರದಕ್ಷಣೆ ಹಾಕಬೇಕಾದರೆ  ಶಿಲ್ಪಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕೆಂಬ ದೃಷ್ಟಿಕೋನದಿಂದ ಕೆತ್ತಲಾಗಿದೆಇದು ಅಮರಾವತಿಯ ವೈಶಿಷ್ಟ್ಯಕನಗನಹಳ್ಳಿಯ ವೈಶಿಷ್ಟ್ಯವೆಂದರೆ ಪ್ರದಕ್ಷಣೆ ಹಾಕಬೇಕಾದರೆ ಭಕ್ತರ ಮನಸ್ಥಿತಿ ಕದಲಬಾರದು ಎಂದು ಪ್ರದಕ್ಷಣ ಪಥ ಸಂಪೂರ್ಣ ಶೂನ್ಯವಾಗಿದೆಇಲ್ಲಿ ಏನನ್ನೂ ಕೆತ್ತಿಲ್ಲಮನಸ್ಸು ಅತ್ತಿತ್ತ ಹೊರಳಲಿಕ್ಕೆಕುತೂಹಲ ಮೂಡಲಿಕ್ಕೆ ಸಾಧ್ಯವಿಲ್ಲಪಥದ ಮಧ್ಯದಲ್ಲಿ ಬುದ್ಧನ ಪಾದಗಳನ್ನ ಬಿಟ್ಟರೆ ಬೇರೆ ಏನೂ ಇಲ್ಲಇದೊಂದು ಭಕ್ತರ ಗಮನವನ್ನು ಕೇಂದ್ರೀಕರಿಸುವ ವಿಧಾನವಾಗಿದೆಆದರೆ ಅಮರಾವತಿಯಲ್ಲಿ ಅಶೋಕನ ಹಿನ್ನೆಲೆ ಗೊತ್ತಾಗಲಿ ಎಂದು ಅಧ್ಬುತವಾದ ಶಿಲ್ಪಗಳನ್ನು ಕೆತ್ತಿಸಲಾಗಿದೆಇಲ್ಲಿ ಶಿಲ್ಪ ಪರಂಪರೆಯನ್ನ ಕೈಬಿಟ್ಟಿಲ್ಲಸ್ತೂಪದ ಮೇಲೆ ಅಂಟಿಸಿದ ಫಲಕಗಳಲ್ಲಿ ಎರಡು ಹಂತದ ಭಾಗ ಮಾಡಿಒಂದು ದೊಡ್ಡ ಫಲಕ ಸುಮಾರು ಏಳು ಎಂಟು ಅಡಿ ಎತ್ತರದ ಪಲಕಗಳಲ್ಲಿ ಎರಡು ಭಾಗ ಮಾಡಿ ಜಾತಕ ಕತೆಗಳನ್ನು ಹೇಳಲಾಗಿದೆಇಷ್ಟು ದೊಡ್ಡ ಪ್ರಮಾಣದಲ್ಲಿ ಜಾತಕ ಕತೆಗಳನ್ನು ಕೆತ್ತಿಸಿರುವ ಇನ್ನೊಂದು ನಿದರ್ಶನ ಎಲ್ಲೂ ಇಲ್ಲಅಜಂತಾ ಪೇಂಟಿಂಗ್ಸ್ನಲ್ಲೂ ಇದಾವೆಅಮರಾವತಿಯಲ್ಲಿ ಸಣ್ಣ-ಸಣ್ಣ ರಿಲೀಫ್ಸ್ ಇದಾವೆಆದರೆ ಇಲ್ಲಿ ದೊಡ್ಡ ಗಾತ್ರದ ಫಲಕಗಳಲ್ಲಿ ಕೆತ್ತಲಾಗಿದೆ ಎನ್ನುವದೇ ವಿಶೇಷಜಾತಕ ಕತೆಗಳಲ್ಲದೆ ಬೇರೆ ಕತೆಗಳನ್ನು ಸಹ ಇಲ್ಲಿ ನಿರೂಪಣೆ ಮಾಡಿದ್ದಾರೆಬುದ್ಧನ ಕಾಲದಲ್ಲಿ ಶಿಲ್ಪಗಳ ವಸ್ತು ಏನಾಗಿತ್ತು ಎಂದು ಅವನ ಪೂರ್ವ ಕಾಲದ ಅಂದರೆ  ಜನ್ಮವಲ್ಲದೆ ಪೂರ್ವ ಜನ್ಮದಲ್ಲಿ ಏನಾಗಿತ್ತು ಎಂದು ಹೇಳುವುದೇ ಜಾತಕ ಕತೆಗಳುಇದಲ್ಲದೆ ಪ್ರಸ್ತುತ ಜೀವನದಲ್ಲಾದ ಘಟನೆಗಳು ಬೇರೆಮುಂದೆ ವಿಶೇಷವಾಗಿ ಪ್ರಸಾರಕ್ಕೆ ಬಂದ ಘಟನೆಗಳು ಬೇರೆಬುದ್ಧ ಬೇರೆ ಬೇರೆ ಕಡೆ ಹೋದಾಗೆಲ್ಲಾ ನಡೆದ ಘಟನೆಗಳಾಗಿವೆಸಿದ್ಧಾರ್ಥನ ಕತೆ ಪ್ರಸ್ತುತ ಕತೆಯಾಗಿದೆಒಂದು ವಿಶೇಷ ಏನೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ ಸಿದ್ಧಾರ್ಥ ನಾಲ್ಕು ಕಡೆ ಹೋದನಾಲ್ಕು ಅವಗಡಗಳನ್ನು ನೋಡಿದ ಎಂಬ ಕತೆಯಿದೆಯಲ್ಲಇದು ಯಾವುದೇ ಜಾತಕ ಕತೆಯಲ್ಲಿ ಅಥವಾ ಶಾಸನದಲ್ಲಿ ಬರುವುದಿಲ್ಲ ಕತೆ ಹೇಗೆ ಬಂತು ಎನ್ನುವುದೇ ವಿಸ್ಮಯಈಗ ನಾವು ಕಾಣುವ ಪಠ್ಯಪುಸ್ತಕಗಳಲ್ಲಿ ಇರುವಂತೆ ಅವನು ನೋಡಿದ ನಾಲ್ಕು ವಸ್ತುಘಟನೆಗಳಿಂದ ಮನ ನೊಂದು ಅರಮನೆ, ಮಡದಿ, ಮಗುವನ್ನು ತ್ಯಜಿಸಿದ ಎಂಬ ಕತೆ ಎಲ್ಲೂ ಇಲ್ಲಇದೊಂದು ಕಟ್ಟು ಕತೆಇದರಲ್ಲಿ ಎರಡು ಮೂರು ಭಾಗಗಳು ಬರುತ್ತವೆಬೇರೆ ಬೇರೆ ಸಂದರ್ಭದಲ್ಲಿ ಬೇರೆ ಸಂಗತಿಗಳನ್ನು ನೋಡಿಅವನ ಮನಸ್ಸಿಗೆ ನೋವಾಯಿತು ಎಂಬುದು ಎರಡನೇ ಭಾಗ. ಆದರೆ ಕಟ್ಟುಕತೆಗೆ ಅವಕಾಶವಿಲ್ಲನಮ್ಮ ಕನಗನಹಳ್ಳಿಯಾಗಲಿಅಮರಾವತಿಯಾಗಲೀಸಾಂಚಿ ಸ್ತೂಪವಾಗಲೀ ಎಲ್ಲಿಯೂ ಇದರ ಪ್ರಸ್ತಾಪ ಬರುವುದಿಲ್ಲ ಕತೆ ಯಾವಾಗ ಬಂತು ಹೇಗೆ ಬಂತು ಎಂಬುದು ಗೊತ್ತಿಲ್ಲ.

 

ಶಿವಾನಂದ ಕಣವಿ: ಸಿದ್ಧಾರ್ಥ ಹೆಂಡತಿಮಗುವನ್ನು ತೊರೆದು ಹೋದ ಎಂಬುದಿದೆಯಲ್ಲಇದು ಬರೀ ಕತೆಯೋ ಅಥವಾ ಎಲ್ಲಾದರು ನಿದರ್ಶನವಿದಿಯೋ?

 

ಷಡಕ್ಷರ ಶೆಟ್ಟರ:  ಕೆಲವು ಕಡೆ  ತರಹದ ವಿಶ್ಲೇಷಣೆ ಇದೆಆದರೆ ಇದು ಪ್ರಧಾನವಾದ ವಸ್ತು ಅಲ್ಲಮಾಯಾದೇವಿ ಆತನ ತಾಯಿಜನ್ಮ ಕೊಡುವುದು ಪ್ರಧಾನ ವಸ್ತುಆಕೆ ನಿಂತುಕೊಂಡೇ ಹಡಿಯುತ್ತಾಳೆಒಂದು ವೃಕ್ಷ ಹಿಡಿದುಕೊಂಡು ನಿಂತೇ ಜನ್ಮ ನೀಡುತ್ತಾಳೆ ಎಂಬುದು ಅಧ್ಬುತಅದಕ್ಕೆ ವಿಶೇಷವಾದ ಸ್ಥಾನ ಇದೆಎರಡನೇ ವಿಷಯವೆಂದರೆ ಅವನು ನಿವೃತ್ತಿ ಆಗಿಕಾಡಿಗೆ ಹೋಗುವುದನ್ನೇ ಸೂಕ್ಷ್ಮವಾಗಿ ತೋರಿಸುವುದುಒಂದು ಕುದುರೆ ಹೋಗುವುದುಮತ್ತೆ ವಾಪಸ್ ಬರುವುದುಇದು ಯಶೋಧರನ ಅಂತಃಪುರದ ವಿವರಣೆಯಲ್ಲಿ ಇದು ಸಿಗುವುದಿಲ್ಲಅಲ್ಲಿ ಅವನಿಗೆ ವೈರಾಗ್ಯ ಬಂತುಅದಕ್ಕೆ ಹೋದ ಎಂದಷ್ಟೇ ಇದೆಅವನಿಗೆ ಮಗು ಆಗಿದ್ದುರಾತ್ರಿ ವೇಳೆಯಲ್ಲಿ ಮನೆ ತೊರೆದ ಎಂಬುದೆಲ್ಲಾ ಅಲ್ಲಿನ ಶಿಲ್ಪಗಳ ಕತೆಗಳಲ್ಲಿ ಬರುತ್ತವೆಬಹಳ ಕುತೂಹಲ ಏನೆಂದರೆತಾಯಿಯನ್ನು ಹೈಲೈಟ್ ಮಾಡಲಾಗುತ್ತದೆಸಿದ್ಧಾರ್ಥನಿಗೆ ಜ್ಞಾನೋದಯವಾಗಿ ವಾಪಸ್ ಬಂದಾಗಮಾಯಾ ದೇವಿ ಹಡೆದ ಕೂಸನ್ನ ಸಾಕ್ಷ ವಂಶಕ್ಕೆ ಪರಿಚಯ ಮಾಡಿಕೊಡುವ ಸನ್ನಿವೇಶವಿದೆಆದರೆ ಬುದ್ಧನು ಮದುವೆ ಮಾಡಿಕೊಡುವ ವಿಷಯವಾಗಲೀಅವನ ಸಂಸಾರದ ವಿಷಯವಾಗಲೀ ಯಾವುದೂ ಇಲ್ಲಅವನು ದೇಹವನ್ನ ದಂಡಿಸಿದ ಪ್ರಸ್ತಾಪ ಬರುತ್ತೆಶಾಕ್ಯ ಮುನಿಯ ಊಹಾತ್ಮಕ ವಿಶ್ಲೇಷನೆ ನಮ್ಮಲ್ಲಿ ಇಲ್ಲಇಂತಹ ವಿಶ್ಲೇಷಣೆಗೆ ಬಹುಶಃ ಗಾಂಧಾರ ಪ್ರದೇಶದಲ್ಲಿ ಮಹತ್ವ ಸಿಕ್ಕಿದೆ ಅನ್ನಿಸುತ್ತೆಇದನ್ನು ನಾವು ಇನ್ನೂ ಪೂರ್ತಿಯಾಗಿ ಅರ್ಥಮಾಡಿಕೊಂಡಿಲ್ಲ ಕತೆಗಳ ಬಗ್ಗೆ ನಾನು ಹೆಚ್ಚು ಹೇಳಲಿಕ್ಕಾಗುವುದಿಲ್ಲಏಕೆಂದರೆನನಗೆ ಕೂಡಲೇ ಗೊತ್ತಾಗಿದ್ದು ಪುಸ್ತಕದಲ್ಲೇಲ್ಲಾ ಓದಿದ ಹಾಗೆ ನಾಲ್ಕು ಅವಘಡಗಳ ನಡೆದ ನಂತರ ಅವರಿಗೆ ವೃರಾಗ್ಯ ಬರುತ್ತಲ್ಲಾ ಎನ್ನುವ ದೃಷ್ಟಿಯಲ್ಲಿ ನೋಡಿದಾಗ ಏನೂ ಅರ್ಥವಾಗಲಿಲ್ಲಯಶೋಧರೆಯ ಬಗ್ಗೆಯಾಗಲೀ,  ಅವರಿಗೆ ಮಗು ಆಯಿತು ಎನ್ನುವುದಾಗಲೀ ಯಾವುದಕ್ಕೂ ಆಧಾರವಿಲ್ಲ.

 

ಶಿವಾನಂದ ಕಣವಿ: ಅಲ್ಲಿ ಬಳಸಿದ ಪ್ರಾಕೃತ ಭಾಷೆಮಹಾರಾಷ್ಟದ ಪ್ರಾಕೃತವೋ ಅಥವಾ ಇಲ್ಲಿನ ಕನ್ನಡತೆಲುಗು ಮಿಶ್ರಿತ ಪ್ರಾಕೃತ ಭಾಷೆಯೋ ?

ಷಡಕ್ಷರ ಶೆಟ್ಟರ:  ಇಲ್ಲಿ ಬಳಸಿರುವ ಪ್ರಾಕೃತ ಶುದ್ಧ ಪ್ರಾಕೃತವಾಗಿದೆಇದಕ್ಕೂ ಸ್ಥಳೀಯ ಭಾಷೆಗೂ ಯಾವುದೇ ಸಂಬಂಧ ಇಲ್ಲಆದರೆ ಪ್ರಾಕೃತ ಬಾಷೆಯಲ್ಲಿರುವ ಕೆಲವು ಪದಗಳು ಮುಂದೆ ಕನ್ನಡದಲ್ಲಿಯೂ ಬರುತ್ತವೆಯೇ ಎಂಬುದನ್ನು ನೋಡಬೇಕಷ್ಟೆಇದು ಯಾವ ರೀತಿಯ ಪ್ರಾಕೃತ ಎಂತ ಹೇಳಲಾಗುವುದಿಲ್ಲಶಾತವಾಹನ ಕಾಲದಲ್ಲಿದ್ದ ಪರಂಪರೆಯಿಂದ ಬಂದ ಪ್ರಾಕೃತ ಇಲ್ಲಿ ಇದೆಇದನ್ನೆಲ್ಲಾ ಭಾಷಾಂತರಿಸಿಪ್ರಕಟಿಸಲಾಗಿದೆಇದನ್ನು ನಾನು ಸಾಕಷ್ಟು ಬಳಸಿಕೊಂಡಿದ್ದೇನೆ.

 

 

ಶಿವಾನಂದ ಕಣವಿ:  ನೀವು ಕರ್ನಾಟಕದಲ್ಲಿ ಇಷ್ಟು ಅಶೋಕನ ಶಾಸನಗಳು ಇದೆ ಎನ್ನುತ್ತೀರಿಕೊಪ್ಪಳದ್ದುಬಳ್ಳಾರಿದಂತೂ ದೊಡ್ಡವು ಶಾಸನಗಳಲ್ಲಿ ಸನ್ನತಿಯ ಪ್ರಾಮುಖ್ಯತೆಯ ಬಗ್ಗೆ ಏನಾದರೂ ಉಲ್ಲೇಖವಿದೆಯೇ?

ಷಡಕ್ಷರ ಶೆಟ್ಟರ:  ಅದಷ್ಟೇ ಅಲ್ಲಸನ್ನತ್ತಿಯಲ್ಲಿರುವ ಸ್ತೂಪಪ್ರದೇಶದ ಹೆಸರೇ ಇಲ್ಲಅಮರಾವತಿಯ ಹೆಸರಿದೆಆದರೆ ಸನ್ನತಿಯ ಹೆಸರಿಲ್ಲಇದು ಒಂದು ಸ್ತೂಪ ಕೇಂದ್ರವಾಗಿತ್ತು ಜನವಸತಿ ಕೇಂದ್ರವಾಗಿರಲಿಲ್ಲ ಎನ್ನಬಹುದುಸ್ತೂಪದ ಹೆಸರಿದೆ ಪ್ರದೇಶದ ಹೆಸರಿಲ್ಲಹೀಗೆ ಇಲ್ಲಿಯಷ್ಟೇ ಅಲ್ಲಆಂಧ್ರದದಲ್ಲಿ ಸಿಕ್ಕ ಸ್ತೂಪದ ಹೆಸರುಗಳು ಬೌದ್ಧ ಕೇಂದ್ರಗಳು ಹೀಗೆ ಇವೆಮೊದಲು ಸ್ತೂಪ ಕೇಂದ್ರಬೌದ್ಧ ಚೈತ್ಯಾಲಯಗಳಾಗಿದ್ದವುಆನಂತರ ಅವುಗಳ ಸುತ್ತಲು ಹಳ್ಳಿವಾಸಸ್ಥಳ ಬೆಳೆದಿದೆ ಎನ್ನಬಹುದು.  ಅಷ್ಟರೊಳಗೆ ಬೌದ್ಧಮತ ಅವನತಿ ಆದ ಕಾರಣಕ್ಕೆ  ಕೇಂದ್ರಗಳ ಬಗ್ಗೆ ಅಷ್ಟೊಂದು ಪ್ರಸ್ತಾಪ ಬರುವುದಿಲ್ಲ ಕೇಂದ್ರಗಳಿದ್ದ ಬಿಕ್ಕುಗಳು ಎಷ್ಟು ಜನ ಇದ್ದರುಯಾರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲಆದರೆ ಸನ್ನತಿ ಒಂದು ಸ್ತೂಪ ಕೇಂದ್ರಮೋನಾಸ್ಟಿಕ್ ಸೆಂಟರ್ ಆಗಿತ್ತು, ಭಿಕ್ಕುಗಳು ಸಹ ಇದ್ದರು ಎಂದು ಹೇಳಬಹುದು.

 

ಶಿವಾನಂದ ಕಣವಿ: ಈಗ ನಾಳಂದದ ಬಗ್ಗೆಹೊಯೆನ್ತ್ಸಾಂಗ್ ನಂತಹ ಪ್ರವಾಸಿಗಳು ಬರೆದಿರುವುಂತೆ ಸನ್ನತಿಯ ಬಗ್ಗೆ ಏನಾದರು ತಿಳಿದುಬರುತ್ತದೆಯೇ?

ಷಡಕ್ಷರ ಶೆಟ್ಟರ:  ನಾನು ನನ್ನ ಪುಸ್ತಕದಲ್ಲಿ ಒಂದು ಸಂಶಯ ವ್ಯಕ್ತಪಡಿಸಿದ್ದೇನೆಅಶೋಕನ ಮೂಲ ಆಡಳಿತದ ಕೇಂದ್ರಸ್ಥಾನ ದಕ್ಷಿಣದ ಸುವರ್ಣಗಿರಿ ಎಂಬುದಿತ್ತು ಸುವರ್ಣಗಿರಿಗೂ ಕನಕಗಿರಿಗೂ ಭಾಷೆಯಲ್ಲಿ ಹಲವು ಸಾಮಿಪ್ಯಗಳಿವೆಇದು ಉತ್ತರ ಕರ್ನಾಟಕದ ಭೀಮಾ ನದಿ ಭಾಗದಲ್ಲಿದೆಅಂದರೆ ಕೃಷ್ಣಾ ನದಿಗಿಂತ ಮೇಲಿದೆಸುವರ್ಣಗಿರಿಯ ಪ್ರಸ್ತಾಪ ಕರ್ನಾಟಕದಲ್ಲಿ ಸಿಕ್ಕಿದ ಶಾಸನಗಳಲ್ಲಿ ಮಾತ್ರ ಇರುವುದರಿಂದ ಸುವರ್ಣಗಿರಿ ಮತ್ತು ಕನಕಗಿರಿಗೆ ಸಂಬಂಧವಿರಬಹುದು ಎಂತ ಅನಿಸುತ್ತೆಭಾಷೆಯಲ್ಲಿ ಕನಕ ಮತ್ತು ಸುವರ್ಣ ಒಂದೇ ಅರ್ಥ ನೀಡುವುದರಿಂದದಕ್ಷಿಣ ಪ್ರದೇಶವು ಅಶೋಕನ ಆಡಳಿತ ಕೇಂದ್ರವಾಗಿತ್ತು ಎನ್ನುವುದಕ್ಕೆ ಅವಶೇಷಗಳಿವೆಕನಕಗಿರಿ ಎನ್ನುವುದು ಇತ್ತೀಚೆಗೆ ಬಂದಿದ್ದಾಗಿದೆಇದು ಭೀಮಾ ನದಿ ತೀರದಲ್ಲಿದ್ದುಸನ್ನತ್ತಿಯಿಂದ ಐದು ಕಿಲೋಮೀಟರ್ ದೂರದಲ್ಲಿದೆಸನ್ನತ್ತಿಕನಗನಹಳ್ಳಿ ಒಂದೇ ಕಾಂಪ್ಲೆಕ್ಸ್ ಆಗಿದೆ.

 

ಶಿವಾನಂದ ಕಣವಿ: ನಿಮ್ಮ ಲೇಖನವೊಂದರಲ್ಲಿ ನೀವು ಮಾಹೀಶ್ಮತಿ ಬಗ್ಗೆ ಬರೆದಿದ್ದೀರಿಇದರ ಬಗೆಗಿನ ಉಲ್ಲೇಖ  ಶಾಸನದಲ್ಲಿ ಬರುತ್ತಾ?

ಷಡಕ್ಷರ ಶೆಟ್ಟರ:  ಹೌದು ಇಲ್ಲಿ ಬರುತ್ತೆಇಲ್ಲಿನ ಶಾಸನಗಳಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಎರಡು ಮುಖ್ಯವಾದ ವಿಷಯಗಳು ತಿಳಿಯುತ್ತವೆಮಹಿಶಮಂಡಲದ ಬಗ್ಗೆ ಮಹಿಶೆ ಅನ್ನುವ ಉಲ್ಲೇಖವಿರುವುದು ಒಂದುಕುಪ್ಪಣ ಎಂಬ ಕೊಪ್ಪಳದ ಪ್ರಸ್ತಾಪ ಕೂಡ ಬರುತ್ತೆಸುಮಾರು ಒಂಬತ್ತು ಶಾಸನಗಳನ್ನ ಅಶೋಕ ಹಾಕಿದರು ಸಹ ಯಾವ ಶಾಸನದಲ್ಲಿಯೂ  ಪ್ರದೇಶದ ಹೆಸರನ್ನು ಹೇಳಿರಲಿಲ್ಲಅವು ಎಲ್ಲಿಯವು ಅಂತಲು ಗೊತ್ತಿರಲಿಲ್ಲಅಶೋಕನ ನಂತರ ಈಗೇನು ಕೊಪ್ಪಳ ಅಂತ ಕರೆಯುತ್ತೇವೆ ಅದು ಕುಪ್ಪಣ ಎಂದಿತ್ತುಎರಡನೇ ಶತಮಾನದಲ್ಲಿಯೇ ಕುಪ್ಪಣ ಅಂತ ಬರುತ್ತೆಕುಪ್ಪಣದ ಇಬ್ಬರು ಭೌದ್ಧರು ಹೋಗಿ ದಾನ ಮಾಡಿದ್ದರು ಎಂದು ಇಲ್ಲಿನ ಶಾಸನದಲ್ಲಿ ಅದರ ಪ್ರಸ್ತಾಪ ಬರುತ್ತೆಕುಪ್ಪಣದ ದಾನಿಗಳು ನಾವು ಮಹಿಶಮಂಡಲದ ಒಂದು ಭಾಗ ಎಂದು ತಿಳಿದುಕೊಳ್ಳುತ್ತಾರೆಅಂದರೆ ಆಗಿನ ಕಾಲದಲ್ಲಿ ಕುಪ್ಪಣದವರೆಗೂ ಮಹಿಶಮಂಡಲ ಇತ್ತುಕುಪ್ಪಣದ ನಿವಾಸಿಗಳಾಗಿದ್ದ ಇವರು ಕನಗನಹಳ್ಳಿಗೆ ಬಂದು ದಾನ ಮಾಡಿದ್ದರು ಎಂಬ ಪ್ರಸ್ತಾಪ ಬರುತ್ತೆ ಮಾಹಿತಿ ನಮ್ಮ ಆರಂಭದ ಇತಿಹಾಸದ ಬಗ್ಗೆ ಇರುವ ಬಹಳ ಮುಖ್ಯವಾದ ವಸ್ತುವಾಗಿದೆನಾವು ಕನ್ನಡ ಶಾಸನಗಳನ್ನು ಅಧ್ಯಯನ ಮಾಡಿಕನ್ನಡದ ಇತಿಹಾಸ ನೋಡಲು ಹೋದಾಗ ಅಷ್ಟು ಸಮರ್ಪಕವಾಗಿರುವುದಿಲ್ಲಇದಕ್ಕೆ ಪ್ರಾಕೃತಸಂಸ್ಕೃತದಂತಹ ಇತರ ಭಾಷೆಗಳ ಶಾಸನಗಳನ್ನು ಸಹ ನೋಡಬೇಕಾಗುತ್ತದೆ

 

ಶಿವಾನಂದ ಕಣವಿ:  ಇದುವರೆಗೆ ಪ್ರಯಾಣದಿಂದ ಆಯಾಸವಾಗಿದ್ದರೂ ಇತಿಹಾಸಕಾರನಲ್ಲದ ನನ್ನಂಥವನಿಗೆ ತಾಳ್ಮೆಯಿಂದ ನಿಮ್ಮ ಸಮಯ ಕೊಟ್ಟಿರಿ, ತಿಳುವಳಿಕೆ ಹಂಚಿಕೊಡಿರಿ. ನಮಸ್ಕಾರ

(ಶಿವಾನಂದ ಕಣವಿ, ಭೌತವಿಜ್ಞಾನಿ; ಹಿರಿಯ ಪತ್ರಕರ್ತ; ಟಾಟಾ ಸಮೂಹದ ಮಾಜಿ ಉಪಾಧ್ಯಕ್ಷ; ಸಧ್ಯ ನಿಯಾಸ್ ನಲ್ಲಿ ಅತಿಥಿ ಪ್ರಾಧ್ಯಾಪಕ).

 

(ಸಂಭಾಷಣೆಯ ಲಿಪೀಕರಣದಲ್ಲಿ ಸಹಾಯ: ಪ್ರೊ. ಪವನ ಗಂಗಾಧರ

ಶ್ರೀ ಪ್ರಗತಿಪರ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು,

ಮಾವಿನಗಳ್ಳಿಗುಬ್ಬಿ ತಾಲ್ಲೂಕು,

ತುಮಕೂರು ಜಿಲ್ಲ)

 

No comments:

Post a Comment