Wednesday, April 22, 2015

Conversation: Prof Roddam Narasimha on clouds, climate change and atmospheric sciences

Excerpts from conversation with Prof Roddam Narasimha our most distinguished aerospace scientist on climate change, clouds and atmospheric sciences in Prajavani
ರೊದ್ದಂ ಪ್ರೀತಿಯ ಮುಂಗಾರು ಋತು

Prajavani, Wed, 04/22/2015 

ದೇಶದ ಕೆಲವೇ ಕೆಲವು ನುರಿತ ವೈಮಾನಿಕ ಮತ್ತು ದ್ರವಚಲನ (ಫ್ಲೂಯಿಡ್ ಡೈನಾಮಿಕ್ಸಿಸ್ಸ್ಟ್) ವಿಜ್ಞಾನಿಗಳಲ್ಲಿ ಕನ್ನಡಿಗ ಪ್ರೊ. ರೊದ್ದಂ ನರಸಿಂಹ ಅವರು ಅಗ್ರಗಣ್ಯರು. ವಿಶ್ವಖ್ಯಾತ ವೈಜ್ಞಾನಿಕ ಸಂಸ್ಥೆಗಳಾದ ಲಂಡನ್ನಿನ ರಾಯಲ್ ಸೊಸೈಟಿ, ಅಮೇರಿಕದ ವಿಜ್ಞಾನ ಅಕಾಡೆಮಿ ಮತ್ತು ತಂತ್ರಜ್ಞಾನ ಅಕಾಡೆಮಿ ಗಳೆಲ್ಲದರ ಗೌರವ ಸದಸ್ಯತ್ವ ಪಡೆದ ಕೆಲವೇ ಇಂಜಿನಿಯರ್ ಗಳಲ್ಲಿ ಅವರೊಬ್ಬರು.   ಸದ್ಯಕ್ಕೆ  ನೆಹರೂ ಉನ್ನತ ವೈಜ್ಞಾನಿಕ ಅಧ್ಯಯನ ಕೇಂದ್ರದ (JNCASR) ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರ ರೊದ್ದಂ ಅವರ ಸೇವೆಯನ್ನು ಪರಿಗಣಿಸಿ  ಪದ್ಮಭೂಷಣ ನೀಡಿ ಗೌರವಿಸಿದೆ.
80ರ ದಶಕದ ಆರಂಭದಲ್ಲಿ  ಲಘು ಯುದ್ಧ ವಿಮಾನ ಹಾಗೂ  ಲಘು ಸಾಗಣೆ ವಿಮಾನಗಳಿಗೆ  ರೂಪು ಕೊಡುವ ಕಾರ್ಯದಲ್ಲಿ ತೊಡಗಿದ ಅವರು, ಅದೇ ಸಮಯದಲ್ಲಿ ದ್ರವ ಪರಿಚಲನೆ ಅಧ್ಯಯನದಿಂದ ಮುಂಗಾರು ಮಾರುತಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂಬ ಸತ್ಯ ವನ್ನು ಅರಿತರು.  ತಡ ಮಾಡದೆ 1982ರಲ್ಲಿ  ಐಐಎಸ್‌ಸಿಯಲ್ಲಿ  ‘ಪರಿಸರ ಹಾಗೂ ಸಾಗರ ಅಧ್ಯಯನ ಕೇಂದ್ರಸ್ಥಾಪಿಸಿದರು.  ಈ ಕೇಂದ್ರ ಮುಂಗಾರಿಗೆ ಸಂಬಂಧಿಸಿದ  ಆಸಕ್ತಿಯುತ ಸಂಗತಿ ಕುರಿತು ಅಧ್ಯಯನ ನಡೆಸಿದೆ.
ಕೇವಲ ವಿಜ್ಞಾನವಷ್ಟೇ ಅವರ ಆಸಕ್ತಿಯ ಕ್ಷೇತ್ರವಲ್ಲ. ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ, ಓದು, ಬರವಣಿಗೆ ಹೀಗೆ ಅವರ ಆಸಕ್ತಿಯ ವಿಸ್ತಾರ ಅಪಾರವದಾದ್ದು. ದ್ರವ ಚಲನೆ ಅಧ್ಯಯನ, ವೈಮಾನಿಕ ಎಂಜಿನಿಯರಿಂಗ್‌, ಕ್ಷಿಪಣಿ, ರಾಕೆಟ್‌, ಮೋಡ, ಹವಾಮಾನ ಹೀಗೆ ವಿಜ್ಞಾನಕ್ಷೇತ್ರದಲ್ಲಿ ವೈವಿಧ್ಯಮಯವಾದ ಕೊಡುಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ(NAL), ವೈಮಾನಿಕ ಇಂಜಿನೀಯರಿಂಗ್ ಕೇಂದ್ರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ (NIAS),  ಬೆಂಗಳೂರಿನ ಜವಾಹರ ಲಾಲ್ ನೆಹರೂ ಉನ್ನತ ಅಧ್ಯಯನ ಕೇಂದ್ರದ (JNCASR) ಹಾಗೂ ಭಾರತ ವಿಜ್ಞಾನ ಅಕಾಡೆಮಿಯ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಚಿಕ್ಕಂದಿನಿಂದಲೂ ಮೋಡಗಳ ಬಗ್ಗೆ ಭಾರಿ ಕುತೂಹಲ ಮತ್ತು ಅಪಾರ ಆಸಕ್ತಿ ಹೊಂದಿದ್ದ ಅವರು ಹವಾಮಾನ, ಮೋಡ, ಮಾನ್ಸೂನ್ ಮಳೆಯ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳನ್ನು ಅನಾವರಣಗೊಳಿಸಿದ್ದಾರೆ. ಭೌತವಿಜ್ಞಾನಿ, ಹಿರಿಯ ಪತ್ರಕರ್ತ ಶಿವಾನಂದ ಕಣವಿ ಅವರೊಡನೆ ರೊದ್ದಮ್ ಅವರು ಮಾಡಿದ ಮಾತುಕತೆಯ ಟಿಪ್ಪಣಿಗಳು ಇಲ್ಲಿವೆ...
ಮೋಡಗಳೆಡೆಗಿನ ನಿಮ್ಮ ಸೆಳೆತಕ್ಕೆ ಮುಖ್ಯ ಕಾರಣಗಳೇನು? ಮೋಡಗಳಿಗೆ ಸಂಬಂಧಿಸಿದಂತೆ ಇನ್ನೂ  ಉತ್ತರ ಸಿಗದ ಪ್ರಶ್ನೆಗಳಾವವು?
ರೊದ್ದಂ: ಸದ್ಯದ ಪರಿಸರ ವಿಜ್ಞಾನದ ಎರಡು ಪ್ರಮುಖ ಸವಾಲುಗಳಾದ  ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳದ ಸಂಶೋಧ ನೆಯ ಕೇಂದ್ರ ಬಿಂದು ಈಮೋಡಗಳು. ಈ ವಿಷಯ ದಲ್ಲಿರುವ ಅನೇಕ ಅನಿಶ್ಚಿತತೆಗಳ ಮೂಲಕಾರಣ ಮೋಡಗಳ ಬಗ್ಗೆ ನಮಗಿರುವ ಅಲ್ಪಜ್ಞಾನ.
ಮೇಲ್ನೋಟಕ್ಕೆ ಕಾಣುವಷ್ಟು ಮೋಡಗಳು ಸರಳ ವಲ್ಲ, ಬಿಡಿಸಲಾಗದ ಒಗಟುಗಳಿದ್ದಂತೆ. ಇದಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಬದಲಾಗುತ್ತಿರುವ ಹವಾಮಾನ ಉತ್ತಮ ಉದಾಹರಣೆ.  ಪ್ರಕೃತಿ ಸದಾ ತನ್ನ ಒಡಲಲ್ಲಿಯ ಏರುಪೇರುಗಳ ಕುರಿತು ಮುನ್ಸೂಚನೆ ನೀಡುತ್ತಲೇ ಇರುತ್ತದೆ.  ಸ್ಪಷ್ಟ ಸುಳಿವು ನೀಡದಿದ್ದರೂ ಪರೋಕ್ಷ ಎಚ್ಚರಿಕೆಯನ್ನಂತೂ ನೀಡುತ್ತಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಲು  ನಮಗೆ ಸಾಧ್ಯವಾಗುತ್ತಿಲ್ಲ.

ಧ್ರುವಗಳಲ್ಲಿ ವೇಗವಾಗಿ ಕರಗುತ್ತಿರುವ ನೀರ್ಗಲ್ಲುಗಳು ಪರಿಸರ ನೀಡುತ್ತಿರುವ ಪರೋಕ್ಷ ಎಚ್ಚರಿಕೆ ಗಂಟೆ. ಅದು ನೀಡುವ ಎಚ್ಚರಿಕೆಯ ವಿಧಾನ ಮಾತ್ರ ಪ್ರತಿ ಬಾರಿ ವಿಭಿನ್ನವಾಗಿರುತ್ತದೆ. ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ವೈಪ ರೀತ್ಯ ಸೇರಿದಂತೆ ಪ್ರಕೃತಿಯಲ್ಲಾಗುವ ಬದ ಲಾವಣೆಗಳನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ.  ಪರಿಸರ ಆಗಾಗ ನೀಡುತ್ತಿರುವ ಅಪಾಯದ ಎಚ್ಚರಿಕೆ ಗಂಟೆ  ಗ್ರಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಕಾದಿದೆ.
ಪರಿಸರಕ್ಕೆ ಸಂಬಂಧಿಸಿದಂತೆ ಅತಿ ದೊಡ್ಡ ಅನಿಶ್ಚಿತತೆ  ಯಾವುದು?
ಖಂಡಿತ ಮೋಡಗಳು. ಮೋಡಗಳ ಪರಿಚಲನೆ, ಆವರ್ತನೆಯನ್ನು ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ತಾಪಮಾನ ಊಹಿಸದಷ್ಟು ಸುಲಭವಾಗಿ ಮೋಡ ಅಥವಾ ಮಳೆಯ ಬಗ್ಗೆ ಭವಿಷ್ಯ ನುಡಿಯುವುದು ಸವಾಲಿನ ಕೆಲಸ. ಮೋಡ ಮತ್ತು ಮಾರುತಗಳು ಚಲನಶೀಲ ಗುಣದಿಂದ ಹಠಾತ್ ತಮ್ಮ ದಿಕ್ಕು, ಪಥ ಬದಲಿಸುವ ಕಾರಣ ಊಹೆ ಕಷ್ಟ. ಮೋಡಗಳು ಮತ್ತು ತಾಪಯುಕ್ತ ವಿಕಿರಣದ ಪರಸ್ಪರ ಸಂಬಂಧ ಇನ್ನೂ ತೊಡಕಿನದು.
ಭೂ ಮಂಡಲದ ಹವಾಮಾನದ ಸಂಕೀರ್ಣ ಸ್ವರೂಪ ಮೊದಲಿನಿಂದಲೂ ನಮ್ಮಲ್ಲಿ ಗೊಂದಲ ಮೂಡಿ ಸಿದೆ. ಭೂಮಿ, ವಾಯುಮಂಡಲ ಹಾಗೂ ಸಾಗರಗಳ ಶಾಸ್ತ್ರೀಯ ಅಧ್ಯಯನ ಮತ್ತು ಉಪಗ್ರಹಗಳಂತಹ ತಂತ್ರಜ್ಞಾನ ಈ ದಿಸೆಯಲ್ಲಿ ನಮಗೆ ನೆರವಾಗುತ್ತಿದೆ. ವಾತಾವರಣದ ಮೇಲೆ ಮೋಡಗಳ ಪ್ರಭಾವ ಏನು?
ಭೂಮಂಡಲದ ವಾತಾವರಣಕ್ಕೂ ಮೋಡಗಳಿಗೂ ನೇರವಾದ ಸಂಬಂಧವಿದೆ. ಹಗಲು ಹೊತ್ತಿನಲ್ಲಿ ಸೂರ್ಯ ನಿಂದ ಭೂಮಿಯತ್ತ ಹೊರಡುವ ವಿಕಿರಣಗಳನ್ನು ಮೋಡಗಳು ತಡೆದು ಮರಳಿ ಪ್ರತಿಫಲನಗೊಳಿಸುವ ಕಾರಣ ವಾತಾವರಣ ತಂಪಾಗುತ್ತದೆ.  ರಾತ್ರಿ ಹೊತ್ತು ಭೂಮಿಯಿಂದ ಹೊರ ಹೊಮ್ಮುವ ಇನ್ಫ್ರಾರೆಡ್‌ಕಿರಣ ಗಳು ಮೋಡಗಳಿಂದಾಗಿ ಮರಳಿ ಭೂಮಿಗೆ ಪ್ರತಿಫಲನ ಗೊಳ್ಳುವ ಕಾರಣ ವಾತಾವರಣ ಬಿಸಿಯಾಗುತ್ತದೆ. ಭೂಮಿ ಮತ್ತು ಸೂರ್ಯನಿಂದ ಹೊರಹೊಮ್ಮುವ ವಿಕಿರಣಗಳ ಜತೆ ಮೋಡಗಳ ಸಂಬಂಧ  ಸಂಕೀರ್ಣವಾದದ್ದು. 
ಮಾನ್ಸೂನ್ ಮಾರುತಗಳಿಗೂ ಈ ಮಾತು ಅನ್ವಯಿಸುತ್ತದೆಯೇ?
ಮಾನ್ಸೂನ್ ಮುನ್ಸೂಚನೆಗಳ ವೈಫ಼ಲ್ಯದ ಅಥವಾ ಅನಿಶ್ಚಿತತೆಯ ಮೂಲ ಕಾರಣವೂ ಕೂಡ ಮೋಡಗಳ ಬಗ್ಗೆ ನಮಗಿದ್ದ ಅಲ್ಪಜ್ಞಾನವೇ ಕಾರಣ. ಭಾರತೀಯ ಹವಾಮಾನ ತಜ್ಞರು ಮತ್ತು ವಿಜ್ಞಾನಿಗಳು ಮಾತ್ರವಲ್ಲ, ವಿಶ್ವದ ಎಲ್ಲ ವಿಜ್ಞಾನಿಗಳೂ 
ಮಾರುತಗಳನ್ನು  ಮುಂಚಿತವಾಗಿ ಊಹಿಸಲು ವಿಫಲವಾಗಿದ್ದಾರೆ. 
ಭಾರತೀಯ ಹವಾಮಾನ ತಜ್ಞರು ಹೆಚ್ಚಾಗಿ ಪಾಶ್ಚಾತ್ಯ  ವಿಜ್ಞಾನಿಗಳನ್ನು ಅನುಸರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಪಾಶ್ಚಾತ್ಯ ವಿಜ್ಞಾನಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಸಂಶೋಧನೆ ಮಾಡುತ್ತಾರೆ. ಹೀಗಾಗಿ ನಾವು ನಮ್ಮದೇ ಕಾರ್ಯಪಟ್ಟಿಯನ್ನು ಅಳವಡಿಸಿಕೊಳ್ಳುವುದು ಉತ್ತಮ. ಪಾಶ್ಚಾತ್ಯರಲ್ಲಿ ತಾಪಮಾನದ ಬಗ್ಗೆ ಕಾಳಜಿ ಹೆಚ್ಚು ಮಳೆಯ ಬಗ್ಗೆ ಕಡಿಮೆ. ತಾಪಮಾನ ಮುನ್ಸೂಚನೆ ನೀಡುವುದು ಬಹು ಮಟ್ಟಿಗೆ ಸರಳ ಆದರೆ ಮಳೆ, ಮೋಡಗಳ ವಿಷಯ ಸಂಕೀರ್ಣ.
ಶತಮಾನಗಳಷ್ಟು ಹಳೆಯದಾದ ಪಂಚಾಂಗಗಳ ಆಧಾರದ ಮೇಲೆ ನುಡಿಯುವ ಹವಾಮಾನ ಮತ್ತು ಮಳೆ ಕುರಿತ ಭವಿಷ್ಯ ಎಷ್ಟರ ಮಟ್ಟಿಗೆ ಕರಾರುವಾಕ್ಕು ಆಗಿರುತ್ತದೆ? ಇವುಗಳ ಸತ್ಯಾಸತ್ಯತೆ ಎಷ್ಟು? ಪಂಚಾಂಗ ಮತ್ತು ಹವಾಮಾನ ಇಲಾಖೆಯ ಮಾಹಿತಿಗಳ ಪರಸ್ಪರ ಎಷ್ಟರ ಮಟ್ಟಿಗೆ ತಾಳೆಯಾಗುತ್ತವೆ?
ಮೊದಲನೆಯದಾಗಿ ಪಂಚಾಂಗ ಅಥವಾ ಹವಾಮಾನ ಇಲಾಖೆ ನೀಡುವ ಮಾಹಿತಿ ನಂಬಿಕೊಂಡು ನಮ್ಮ ರೈತರು ಕೃಷಿ ಮಾಡುವುದಿಲ್ಲ. ಮಳೆ, ಮಾರುತ, ಹವಾಮಾನದ ಬಗ್ಗೆ  ಸಾಂಪ್ರದಾಯಿಕ ಜ್ಞಾನ ಅವರಿಗೆ ಬಳುವಳಿಯಾಗಿ ಬಂದಿದೆ.  ಮೋಡಗಳ ಬಗ್ಗೆ ಭವಿಷ್ಯ ನುಡಿಯುವ ಪಂಚಾಂಗ ರಚಿಸಿದವರಿಗೆ ಯಾವ ಜ್ಞಾನವೂ ಇದ್ದಿರಲಿಲ್ಲ ಎಂದು ಹೇಳಲಾರೆ.   ಆದರೆ, ಹವಾಮಾನ ಇಲಾಖೆಯ ಅಂಕಿ, ಅಂಶಗಳು ಮತ್ತು ಪಂಚಾಂಗದ ಭವಿಷ್ಯವನ್ನು ಹೋಲಿಕೆ ಮಾಡಿದಾಗ ಒಂದೊಕ್ಕೊಂದು ತಾಳೆಯಾಗುವುದಿಲ್ಲ.
ಎಲ್ಲ ಮೋಡಗಳು ಮಳೆ ಸುರಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಮೋಡಗಳ ಜೀವಿತ ಪ್ರಮಾಣ  ಕಡಿಮೆ. ಮೋಡಗಳು ಘನೀಕರಿಸಿದ ದ್ರವ.   ಮೋಡ ಕರಗಿ  ಮಳೆಯಾಗುವ ಕ್ರಿಯೆ ನಿಜಕ್ಕೂ ಅದ್ಭುತ ರಾಸಾಯನಿಕ ಕ್ರಿಯೆ. ಸಾಗರ ಮೇಲ್ಮೈ ತಾಪಮಾನ ಮತ್ತು ಹವಾಮಾನ ಅಧ್ಯಯನಕ್ಕಾಗಿ ಇಸ್ರೊ ಕಳಿಸಿರುವ ಉಪಗ್ರಹಗಳಿಂದ ಏನಾದರೂ ಲಾಭವಾಗಿದೆಯೇ?
ಖಂಡಿತ. ಬಹಳ ಲಾಭವಾಗಿದೆ. ಕಳೆದ ವರ್ಷ ಒಡಿಶಾ ದಲ್ಲಿ ಬೀಸಿದ ಚಂಡಮಾರುತದ ಬಗ್ಗೆ ಉಪಗ್ರಹಗಳ ಆಧಾರದ ಮೇಲೆ ಭಾರತೀಯ ಹವಾಮಾನ ಇಲಾಖೆ ಮುಂಚಿತವಾಗಿ ನಿಖರ ಮಾಹಿತಿ ನೀಡಿತ್ತು.   2013ರಲ್ಲಿ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದ ಕರಾವಳಿಗೆ ಫೈಲಿನ್ಚಂಡಮಾರುತ ಅಪ್ಪಳಿಸಿದಾಗ ಹವಾಮಾನ ತಜ್ಞರ ಸಮಯೋಚಿತ ನಿಖರ ಮಾಹಿತಿಯಿಂದ ಸಾವಿರಾರು ಜನರ ಜೀವ ಉಳಿಯಿತು. ಉಳಿದೆಲ್ಲ ರಾಷ್ಟ್ರಗಳು ವಿಫಲರಾದಾಗ ನಾವು ಕರಾರುವಾಕ್ಕು ಮಾಹಿತಿ ನೀಡಲು ಯಶಸ್ವಿಯಾಗಿದ್ದೆವು.
ಆದರೆ, ಅದೇ ಉತ್ತರಾಖಂಡದಲ್ಲಿಯ ವರ್ಷಸ್ಫೋಟದ ಬಗ್ಗೆ ಮುನ್ಸೂಚನೆ ನೀಡಲು ನಾವು  ವಿಫಲರಾದೆವು.  ಹವಾಮಾನ ಮುನ್ಸೂಚನೆಯನ್ನು ಸಮರ್ಥವಾಗಿ ಊಹಿಸಲು ನೆಲ​-ಜಲ​-ಗಾಳಿ ನಡುವಿನ ಪರಸ್ಪರ  ಸಂವಹನ  ತಿಳಿದುಕೊಳ್ಳುವುದು ​ತುಂಬಾ ಮುಖ್ಯ. ಹವಾಮಾನ ಮುನ್ಸೂಚನೆಯ ಕೆಲಸ  ಸಂಕೀರ್ಣವಾಗಿದ್ದು ಮಾನವ​ ನಿರ್ಮಿತ ಉಪಗ್ರಹ ಮತ್ತು ಸುಧಾರಿತ ವಿಜ್ಞಾನ-ತಂತ್ರಜ್ಞಾನದ ನೆರವಿನಿಂದ ಹವಾಮಾನವನ್ನು ಒಂದು ಹಂತಕ್ಕೆ ಅಂದಾಜಿಸಬಹುದು. 
ಭಾರತಕ್ಕೆ ಹೋಲಿಸಿದಾಗ ಅಮೆರಿಕ ಮತ್ತು ಬ್ರಿಟನ್‌ ಹವಾಮಾನ ತಜ್ಞರು ನಿಖರ ಮಾಹಿತಿ ನೀಡುತ್ತಾರೆ ಎಂಬ ಪ್ರತೀತಿ ಇದೆ.
ಉತ್ತರದ ದೇಶಗಳಿಗೆ ಹೋಲಿಸಿದರೆ ಉಷ್ಣ ವಲಯ ವಾತಾವರಣ ಭಾರಿ ಸಂಕೀರ್ಣತೆಯಿಂದ ಕೂಡಿದೆ. ಪಾಶ್ಚಾತ್ಯ ಮತ್ತು ಐರೋಪ್ಯ ರಾಷ್ಟ್ರಗಳ ವಾತಾವರಣದ ಅಧ್ಯಯನ ತುಂಬಾ ಸುಲಭ. ಆದರೆ, ನಮ್ಮಲ್ಲಿ ಹಾಗಲ್ಲ. ಆದರೂ, ಅಮೆರಿಕ ಹಾಗೂ ಬ್ರಿಟನ್ ಹವಾಮಾನ ತಜ್ಞರು ಮತ್ತು ವಿಜ್ಞಾನಿಗಳು ಅನೇಕ ಬಾರಿ ನಿಖರವಾದ ಮಾಹಿತಿ ನೀಡಲು ವಿಫಲರಾದ ನಿದರ್ಶನಗಳಿವೆ.
ಕೃತಕ ಮೋಡಗಳ ನಿರ್ಮಾಣದ ಬಗ್ಗೆ ಹೇಳಿ
ಮೋಡಗಳ ಕುರಿತಾದ ವೈಜ್ಞಾನಿಕ ಅಧ್ಯಯನ 1960ರಿಂದ  ಆರಂಭವಾಯಿತು. ಅವೆಲ್ಲ ಅತ್ಯಂತ ಸರಳ ಪ್ರಯೋಗಳಾಗಿದ್ದವು. ಆದರೆ, ಪ್ರಯೋಗಾಲಯದಲ್ಲಿ ನಿರ್ಮಿಸಿದ  ಕೃತಕ ಮೋಡಗಳು ನೈಜ ಮೋಡಗಳನ್ನು ಹೋಲುತ್ತಿರಲಿಲ್ಲ ಮತ್ತು ಅವುಗಳಂತೆ ವರ್ತಿಸುತ್ತಿರಲಿಲ್ಲ  ಎಂಬ ಕಾರಣಕ್ಕಾಗಿ 70ರ ದಶಕದ ವೇಳೆಗೆ  ಕೃತಕ ಮೋಡಗಳ ನಿರ್ಮಾಣ  ಪ್ರಯತ್ನ ಕಡಿಮೆಯಾಯಿತು.
1980ರಲ್ಲಿ ಈ ಪ್ರಯತ್ನವನ್ನು ನಾನು ಮುಂದುವರೆಸಿದೆ. ನಾವು ಅನೇಕ ಬಗೆಯ ಮೋಡಗಳನ್ನು ಪ್ರಯೋಗಾಲದಲ್ಲಿಯೇ ಕೃತಕವಾಗಿ ನಿರ್ಮಿಸುವ ಹಂತಕ್ಕೆ ಯಶಸ್ವಿಯಾದೆವು. ಕೃತಕ ಮೋಡಗಳ ನಿರ್ಮಾಣ ನಿಜಕ್ಕೂ ಕಷ್ಟದ ಕೆಲಸ. ಈಗೀಗ ಪ್ರಯೋಗಾಲಯಗಳಿಗಿಂತ  ಕಂಪ್ಯೂಟರ್‌ಗಳ ನೆರವಿನಿಂದ ವಿಶ್ವಾಮಿತ್ರ ಸೃಷ್ಟಿ (virtual simulation) ಸುಲಭವಾಗಿದೆ.
ಪುರಾತನ ಭಾರತೀಯ ವಿಜ್ಞಾನ  ಕ್ಷೇತ್ರದ ಸಾಧನೆಗಳ ಕುರಿತು 500 ಪುಟಗಳ ಬೃಹತ್ ಗ್ರಂಥ ಬರೆಯಲು ನಿಮಗೆ ದೊರೆತ ಪ್ರೇರಣೆ ಏನು?
ಪರಿಸರದ ಬಗೆಗೆ ನಮ್ಮಸಂಸ್ಕೃತಿಯ ದ್ರುಷ್ಟಿಕೋನದ ಬಗ್ಗೆ ನಾನು ಪುಸ್ತಕ ಬರೆದಿದ್ದೇನೆ. ವಿಜ್ಞಾನದ ಜತೆಗೆ ಭಾರತೀಯ ಕಲೆ, ಕಾವ್ಯ, ಸಾಹಿತ್ಯ  , ಇತಿಹಾಸವನ್ನೂ ಈ ಪುಸ್ತಕ ಒಳಗೊಂಡಿದೆ. ಅದರ್ಂತೆಯೇ ಅಮೆರಿಕದ ಒಬ್ಬ ವಿಜ್ಞಾನಿಯ ಜತೆ ಸೇರಿ ವಿಜ್ಞಾನ ಕ್ಷೇತ್ರಕ್ಕೆ ಭಾರತೀಯರ ಕೊಡುಗೆಯ ಪ್ರಮುಖ ವಿಷಯಗಳನ್ನು ತಿಳಿಸುವ  ‘ಎನ್‌ಸೈಕ್ಲೋಪಿಡಿಯಾ ಆಫ್‌ ಇಂಡಿಯನ್ ಸೈನ್ಸ್‌ಎಂಬ ಪುಸ್ತಕವನ್ನೂ  ನಾನು ಬರೆದಿದ್ದೇನೆ. ವಿಶ್ವಕ್ಕೆ ಮತ್ತು ಪಾಶ್ಚಾತ್ಯ ಶಿಕ್ಷಣ ಪಡೆದ ನಮ್ಮ ಪೀಳಿಗೆಯವರಿಗೆ ನಮ್ಮ ಪ್ರಾಚೀನ ವೈಜ್ಞಾನಿಕ ಪರಂಪರೆಯ ಬಗ್ಗೆ ಇರುವ ಅಜ್ಞಾನವೇ ನನ್ನನ್ನು ಪ್ರೇರಿಸಿತು.
ಕನ್ನಡಕ್ಕೆ: ಗವಿಸಿದ್ದಪ್ಪ ಬ್ಯಾಳಿ


Tuesday, April 21, 2015

Interview: D P Biradar on Agricultural R&D


http://www.rediff.com/news/interview/this-is-indias-biggest-challenge-did-you-know-about-it/20150421.htm

This is India's biggest challenge. Did you know about it?

Last updated on: April 21, 2015 09:37 IST

'Any new technology, either before or soon after its release, will face severe criticism by one or the other segment of society. It is only after seeing the benefits of new technology for themselves that our farmers accept it.'
'The arable land in India is not increasing and currently hovers at around 140, 145 million hectares.'
'Today, Indian agriculture has to work towards achieving nutritional security.'Scenes from Krishi Mela UAS Dharwad Sep 2014

The College of Agricultural Sciences was founded nearly 70 years ago by renowned scientist S W Menshinkai in the appropriately named Yettinagudda (Hill of Bullocks) on the outskirts of Karnataka's cultural capital, Dharwad.
It took another four decades for it to become a full fledged university -- UAS Dharwad.
It has, to date, released over 200 new varieties of crops.
Its annual farmers's exhibition, the Krishi Mela, attracts over a million progressive farmers and is the largest of its kind in India.
Recognised as a leading institutions in India that has consistently engaged in high quality research, teaching and extension among farmers, the university today faces new challenges.
Plant biotechnologist Dr D P Biradar is the new vice-chancellor at the university. His dream is to take forward the path-breaking work done by the university so far and make it a globally known institution that serves the needs of local farmers.
He discussed the challenges facing agricultural research with Shivanand Kanavi.
What are the current challenges in agricultural research and education in India?
Post Independence, Indian agriculture -- which was traditional and focused on subsistence -- was unable to meet the food demand of a fast growing population. This forced India to go with a begging bowl to the world for food aid.
During the Green Revolution that was started in the sixties and seventies, the priority of the government was to produce more food. Thus, semi-dwarf wheat varieties from Mexico and chemical fertilisers were introduced in the Indo-Gangetic plains and, later, elsewhere.
The Green Revolution was a success story and helped us achieve national food security.
Today, Indian agriculture has to work towards achieving nutritional security.
I believe technological intervention is the only option to achieve both national food and nutritional security.
The arable land in India is not increasing and is currently hovering at around 140, 145 million hectares.
Therefore, it is not just important to grow only high yielding crop cultivars (a plant created and maintained through cultivation); it should be of better quality as well.
Any new technology, either before or soon after its release, will face severe criticism by one or the other segment of society. It is only after seeing the benefits of new technology for themselves that our farmers accept it. A good example of this is Bt cotton.
How were you able to convince farmers about Bt cotton?
When genetically modified crops were introduced in India, there was -- like elsewhere around the world -- a lot of hue and cry.
I remember similar, unscientific objections to hybrid crops released in the seventies.
Many environmental groups and farmers associations strongly opposed the introduction of any kind of GM crop, including Bt cotton. Some farmers' associations went around burning Bt cotton trial fields across Karnataka and elsewhere in India.
Even though cotton is mainly grown for fibre and not consumed directly by human beings, cotton seed cake is fed to animals. There were questions as to whether Bt cotton seed was good enough for cattle and bird feed.
Today, after of constant testing and evaluation on farmers's fields, Bt cotton is accepted by cotton growing farmers. Over 90 per cent of the cotton acreage in India is Bt cotton and farmers, both under rain-fed and irrigated conditions, have seen higher yields.
What are the advantages of Bt technology in cotton?
The yields are higher. It has greatly reduced the use of pesticides, especially for the pest known as bollworm.
Earlier, farmers needed to spray pesticides at least 18, 20 times to prevent a bollworm attack. With Bt, you need hardly one or two.
Even for scientists, it is amazing to see that when you keep a few Bt Cotton leaves among a bunch of bollworms in a lab, the worms start dying in front of your eyes after eating the leaves.
It has helped reduce environmental pollution by lowering the usage of pesticide against bollworms.

What are your university's plans regarding cotton?

UASD's work in cotton is well known the world over. We have been working on Bt technology for quite some time and I am confident that, when Bt cotton seeds are introduced in the market by public sector research (companies), we will be in the front ranks.
We have even developed, through GM technology, cotton varieties in blue, brown and peach.
Similar efforts should be made to make sure that safe GM brinjal and other food crops are developed and popularised.
We are now concentrating on Bt cotton hybrids. We are also developing Bt cotton varieties suited to high density cultivation.
Unlike Bt hybrids, when Bt varieties are released, the seeds can be reused by farmers. They need not go back to the seed marketing firms. Thus, we help farmers in the long-run.
Can Bt cotton varieties compete with Bt cotton hybrids?
Yes, of course. Our varieties are well adapted to local environments, including limited water environments and both rain fed and dry land. Therefore, they would definitely perform well.
Karnataka is supposed to be the second-most water stressed state after Rajasthan. What are you doing about that?
Dryland is another major area where new technological interventions are required to adapt to abiotic stress (hot and dry climates).
This includes drought tolerant crop cultivars and the introduction of drought resistant genes, rain-water harvesting, soil conservation and mechanisation that is suited to the small holdings of Indian farmers.
We are weak in agricultural engineering, so I see a greater opportunity to work with engineering colleges.
The collaboration between plant biologists and engineers should address the problems related to labour scarcity and the mechanised cultivation and harvesting of agricultural crops.
What about intellectual property rights for the research and development done by your university?
UAS Dharwad has released over the years over 200 varieties, but we neglected registering many of them. Now, we are registering all the varieties released by us.
We will seek the law university's help in strengthening our IPR cell.
How are you developing international collaborations?
We have now revamped our university Web site (external link), highlighting our research accomplishments and scientific publications to increase its global visibility and explore scientific collaborations with outside institutions.
UAS Dharwad has quite a few Memorandums of Understanding with outside institutions like Texas A&M and Cornell University in the US; McGill and University of Manitoba in Canada and many others, including some African institutions.
We have established an International Centre for Agricultural Development here in Dharwad and have identified six themes for research with global partners.
We want to develop collaborations with Asian and African partners. For example, we now have MoUs with China and LUANAR, Malawi. In fact, we have been attracting students from Africa and the Middle East regularly.
A minute fraction of agriculture graduates go back to farming. What measures are being taken by UASD so that more graduates go back to the farm and use their knowledge?

This is an issue

( Plant biotechnologist and vice-chancellor, UASD, Dr D P Biradar).
The government recently started a two-year diploma course in agriculture, which is picking up well. However, the number of graduates returning back to the farm is still very small. New, out-of-the-box ideas are required to change this situation.
We are encouraging our graduates to work closely with their farming families.
I think both agriculture graduates and diploma holders need to be provided with credit by the banks so that they are encouraged to take up farming or agriculture-related enterprise.
I am floating this idea at the government level; hopefully, they will consider it. We have also started an incubator here develop agri-business ideas from our alumni and others into enterprises.
We are now importing 13 million tons of edible oil. What is UASD's contribution in the oilseed mission?
Our university has done good work on oilseed crops -- peanut, sunflower and soybean.
We have new and large scale oilseed seed production activities to popularise the cultivation of oilseed crops. This is being done in peanut (higher yield), soybean (rust resistant) and safflower (mechanisation).
Further, our seed unit is doing great job in supplying quality seeds to the farmers of Karnataka and across India.
(Shivanand Kanavi is a theoretical physicist, senior journalist, author and former vice-president, TCS.)Sunday, April 19, 2015

Prof Rajshekhar Bhoosnurmath-A tribute

Prajavani, April 13, 2015

Prof Rajshekhar Bhoosnurmath, a wonderful Physics teacher and a pioneer in Sci-Fi writing in Kannada passed away on April 12, 2015 in Dharwad. Here is my tribute to him published in Prajavani.http://t.co/wv3YC0joBY

NIAS Interview Dr Baldev Raj, Prajavani


Prajavani, April 12, 2015
Interview with Dr Baldev Raj, Director, National Institute of Advanced Studies (NIAS), Bengaluru

ನಿಯಾಸ್ ನಂಥಸಂಸ್ಥೆಗಳಿಗೆ ಕಾರ್ಪೊರೇಟ್‌ ಅನುದಾನ ಹೊಸ ಆಶಾಕಿರಣDr Baldev Raj, Director, NIAS


ಬೆಂಗಳೂರಿನ ಮಲ್ಲೇಶ್ವರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಹೊಂದಿಕೊಂಡಿರುವ , ಹಸಿರು ಭರಿತ ಕ್ಯಾಂಪಸ್‌ನಲ್ಲಿ 25 ವರ್ಷಗಳ ಹಿಂದೆ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ’ (ನಿಯಾಸ್ -ಎನ್‌ಐಎಎಸ್‌ )ಸ್ಥಾಪಿಸಿದವರು ಉದ್ಯಮಿ ಜೆಆರ್‌ಡಿ ಟಾಟಾ ಮತ್ತು ಪರಮಾಣು ವಿಜ್ಞಾನಿ ರಾಜಾರಾಮಣ್ಣ. ಈ ಸಂಸ್ಥೆ ಈ ವರೆಗೆ ಹೊಂದಿರುವ ವರ್ಚಸ್ವ ಮತ್ತು ಮುನ್ನೋಟಗಳ ಕುರಿತು ಅದರ ನಿರ್ದೇಶಕ ಬಲದೇವ ರಾಜ್ ಅವರ ಜೊತೆ ಶಿವಾನಂದ ಕಣವಿ ನಡೆಸಿದ ಮಾತುಕತೆಯ ಸಂಕ್ಷಿಪ್ತ ಟಿಪ್ಪಣಿಗಳು ಕೆಳಗಿವೆ

ಬಲದೇವ ರಾಜ್ ಅವರು ಪ್ರಸಿದ್ಧ ಲೋಹ ಶಾಸ್ತ್ರಜ್ಞ. ಪರಮಾಣು ಶಕ್ತಿ ಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಕಾಲ ಮಹತ್ವದ ಕೆಲಸ ಮಾಡಿ ಆರು ತಿಂಗಳ ಹಿಂದೆ ನಿಯಾಸ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ರಾಜಾ ರಾಮಣ್ಣ, ರೊದ್ದಂ ನರಸಿಂಹ, ಕಸ್ತೂರಿ ರಂಗನ್ ಮತ್ತು ವಿ.ಎಸ್‌. ರಾಮಮೂರ್ತಿ ಅವರಂಥ ಘಟಾನುಘಟಿಗಳನ್ನು ನಿರ್ದೇಶಕರನ್ನಾಗಿ ಹೊಂದಿದ ಹಿರಿಮೆ ಈ ಸಂಸ್ಥೆಗಿದೆ.

* ನಿಯಾಸ್ ಗೆ  25 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪಾತ್ರ ಮತ್ತು ಭವಿಷ್ಯದ ಬಗ್ಗೆ ನಿಮ್ಮ ಮಾತು ಏನು?

ಬಲದೇವ ರಾಜ್: ಸಮಷ್ಟಿಯ ದೃಷ್ಟಿಕೋನ ಹೊಂದಿರುವ ಬೌದ್ಧಿಕ ನಾಯಕರು ಇಲ್ಲಿ ರೂಪುಗೊಳ್ಳಬೇಕು ಎಂಬುದು ಜೆಆರ್‌ಡಿ ಟಾಟಾ ಮತ್ತು ರಾಜಾ ರಾಮಣ್ಣ ಅವರ ಉದ್ದೇಶವಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಇಂಥನಾಯಕರನ್ನು ರೂಪಿಸುವ ಆಸೆ ಅವರದಾಗಿತ್ತು. ದೇಶದ ಬೇರೆ ಬೇರೆ ರಂಗಗಳಲ್ಲಿ ಮುಂಚೂಣಿ ಸ್ಥಾನ ವಹಿಸಿಕೊಳ್ಳುವ ಗಣ್ಯರು, ಇಲ್ಲಿಗೆ ಬಂದು, ಇಲ್ಲಿರುವ ಅನ್ಯ ಕ್ಷೇತ್ರಗಳ ಮೇಧಾವಿಗಳ ಜೊತೆ ಸಮಯ ಕಳೆಯಬೇಕು ಎಂಬ ಅಭಿಲಾಷೆ ಅವರದಾಗಿತ್ತು. ಆಗ ನಡೆಯುವ ಮಾತುಕತೆಯೇ ಅವರ ವೈಚಾರಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ಟಾಟಾ ಮತ್ತು ರಾಜಾ ರಾಮಣ್ಣ ನಂಬಿದ್ದರು.
ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಯನ್ನು ನಾವು ಮಾಡಿದ್ದೇವೆ ಎಂಬುದು ನನ್ನ ಅನಿಸಿಕೆ. ಸರ್ಕಾರ ಮತ್ತು ಉದ್ಯಮ ರಂಗದ ನಾಯಕರಿಗಾಗಿ ಹದಿನೈದರಿಂದ ಇಪ್ಪತ್ತು ಇಂಥ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜಿಸುತ್ತೇವೆ. ನಂತರ ಅವರು ತಾವು ಬಹಳಷ್ಟು ಬದಲಾಗಿರುವುದಾಗಿ ಹೇಳಿಕೊಂಡಿದ್ದಾರೆ.
ನಮ್ಮ ಸಂಸ್ಥೆ ಬೀರಿದ ಪ್ರಭಾವ ದೊಡ್ಡದು. ಆದರೆ, ನಮಗೆ ಬರುವ ಹಣಕಾಸಿನ ಅನುದಾನ ಇಂದಿನ ದಿನಗಳಲ್ಲಿ ತೀರಾ ಅಲ್ಪ. ನಾನು ಇಲ್ಲಿಗೆ ಬಂದ ನಂತರ ನಮ್ಮ ಸಹವರ್ತಿಗಳು, ಉಪನ್ಯಾಸಕ ಸಿಬ್ಬಂದಿ, ಪ್ರೊಫೆಸರ್‌ಗಳು, ಪಿಎಚ್‌.ಡಿ. ವಿದ್ಯಾರ್ಥಿಗಳ ಜೊತೆ ವಿಸ್ತಾರವಾಗಿ ಮಾತನಾಡಿದ್ದೇನೆ. ಸಂಸ್ಥೆ ಪ್ರಭಾವಿ ಆಗಬೇಕಾದರೆ ಜನ ಸಂಪನ್ಮೂಲವಲ್ಲದೆ, ಹಣ ಕೂಡ ಅಗತ್ಯ. ಟಾಟಾ ಟ್ರಸ್ಟ್‌ ನಮಗೆ ಬೆಂಬಲ ನೀಡುತ್ತಿವೆ. ಟಾಟಾ ಟ್ರಸ್ಟ್‌ನವರು ಬಹಳ ಉದಾರಿಗಳು. ದೇಶದ ಬಗ್ಗೆ ಅಪಾರ ಬದ್ಧತೆ ಹೊಂದಿರುವವರು. ನಿಜ ಹೇಳಬೇಕೆಂದರೆ, ನಾವು ಅಸ್ತಿತ್ವದಲ್ಲಿರುವುದೇ ಟಾಟಾ ಟ್ರಸ್ಟ್‌ಗಳ ಕಾರಣದಿಂದ. ಮುಂದಿನ ದಿನಗಳಲ್ಲಿ ನಾವು ವರ್ಷಕ್ಕೆ ₨ 10 ಕೋಟಿಯಿಂದ ₨ 15 ಕೋಟಿವರೆಗೆ ಬಡ್ಡಿ ಬರುವಂಥ ದತ್ತಿ ಹಣವನ್ನು ಒಗ್ಗೂಡಿಸಿಕೊಳ್ಳಬೇಕು. ಇಂಥ ಸಂಸ್ಥೆಗಳ ವಾರ್ಷಿಕ ಖರ್ಚಿಗೆ ಇದು ದೊಡ್ಡದೇನೂ ಅಲ್ಲ.

*
ದತ್ತಿ ಹಣಒಗ್ಗೂಡಿಸಲು ನೀವು ಕಾರ್ಪೊರೇಟ್‌ ಸಂಸ್ಥೆಗಳು, ಸರ್ಕಾರ ಮತ್ತು ಅನಿವಾಸಿ ಭಾರತೀಯರ ಮೊರೆ ಹೋಗುವಿರಾ?

ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದ ವಿಷಯವನ್ನು ಕಂಪೆನಿ ಕಾಯ್ದೆಗೆ ಇತ್ತೀಚೆಗೆ ಸೇರಿಸಿರುವ ಕಾರಣ, ಸಾಮಾಜಿಕವಾಗಿ ಬಹುದೊಡ್ಡ ಪರಿಣಾಮ ಬೀರುವ ನಮ್ಮಂಥ ಸಂಸ್ಥೆಗಳು ಕಾರ್ಪೊರೇಟ್‌ ಸಂಸ್ಥೆಗಳಿಂದ ದೊಡ್ಡ ಪ್ರಮಾಣದಲ್ಲಿ ಅನುದಾನ ನಿರೀಕ್ಷಿಸಬಹುದು. ನಾನು ಕೆಲವು ಕಾರ್ಪೊರೇಟ್‌ ಕಂಪೆನಿಗಳ ಜೊತೆ ಈಗಾಗಲೇ ಮಾತುಕತೆ ಆರಂಭಿಸಿದ್ದೇನೆ.

*
ನಿಯಾಸ್ ನ ಸಿಬ್ಬಂದಿ ಯಾವ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ?

ಸಂಸ್ಕೃತಿ, ಪರಂಪರೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿದ್ವಾಂಸರು, ತಜ್ಞರೂ ಆದವರು ನಮ್ಮಲ್ಲಿದ್ದಾರೆ. ಅಸಾಂಪ್ರದಾಯಿಕ ಪದ್ಧತಿಗಳ ಮೂಲಕ ಶಿಕ್ಷಣ ನೀಡುವ ಮಾರ್ಗಗಳ ಶೋಧದಲ್ಲಿರುವ ಮಕ್ಕಳ ಮನಶಾಸ್ತ್ರಜ್ಞರು ನಮ್ಮಲ್ಲಿದ್ದಾರೆ. ಬಾಹ್ಯಾಕಾಶ, ರಕ್ಷಣೆ, ಅಣುಶಕ್ತಿ, ಊರ್ಜಾ, ಪರಿಸರ ಕುರಿತು ಸಂಶೋಧನೆ ನಡೆಸುತ್ತಿರುವ ಗುಂಪುಗಳಿವೆ. ಕೃಷಿ ಕ್ಷೇತ್ರದ ಕಡೆಗೂ ನಮ್ಮ ಕೆಲಸವನ್ನು ವಿಸ್ತರಿಸಬೇಕು ಎನ್ನುವುದು ನನ್ನ ಇಚ್ಛೆ. ಅದರಲ್ಲೂ ವಿಶೇಷವಾಗಿ, ಸುಸ್ಥಿರ ಕೃಷಿ ಬಗ್ಗೆ ನಾವು ಹೆಚ್ಚು ಕೆಲಸ ಮಾಡಬೇಕು. ನಾವು ಈಗ ಭಾರತದಲ್ಲಿ ಕೈಗಾರಿಕಾ ವಲಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಆದರೆ ಕೃಷಿ ಕ್ಷೇತ್ರದ ಭವಿಷ್ಯ ಕುರಿತು ಸಾಕಷ್ಟು ಗಮನಹರಿಸುತ್ತಿಲ್ಲ.
ಈ ಎಲ್ಲ ಕ್ಷೇತ್ರಗಳಲ್ಲಿ ಕೆಲವು ಪ್ರೊಫೆಸರ್‌ಗಳು, ಯುವ ಸಹಾಯಕರು, ಪಿಎಚ್‌.ಡಿ ಪಡೆದವರು, ಪಿಎಚ್‌.ಡಿ ವಿದ್ಯಾರ್ಥಿಗಳು ಕ್ಷೇತ್ರ ಸಂಶೋಧನೆ ಕೈಗೊಳ್ಳುವಂತೆ ಮಾಡಬೇಕು ಎಂಬುದು ನನ್ನ ಯೋಜನೆ. ಸತ್ಯೇನ್ ಬೋಸ್‌, ಎಂ.ಎನ್. ಸಹಾ ಅಥವಾ ಸರ್ ಸಿ.ವಿ. ರಾಮನ್ ಕಾಲದ ಜಗತ್ತು ಇದಲ್ಲ. ನಾವು ಈ ಕಾಲದಲ್ಲಿ ವಾಸ್ತವವಾದಿ ಆಗಿರಬೇಕು. ನಮ್ಮ ಯುವಕರಿಗೆ ತುಸು ಮಟ್ಟಿಗಾದರೂ ಹಣ ಬೇಕು. ಆಗ ಮಾತ್ರ ನಾವು ಈಗಿನದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ, ಚೇತೋಹಾರಿಯಾದ ಕೆಲಸಗಳನ್ನು ಮಾಡಬಹುದು.

* 
ನೀತಿ ಆಯೋಗಕ್ಕೆ ಸಲಹೆ ನೀಡುವಂತಿದ್ದರೆ ನೀವು ಯಾವ ವಿಚಾರಗಳಿಗೆ ಆದ್ಯತೆ ನೀಡುತ್ತೀರಿ?

ಎರಡು ಹೊಸ ವಿಚಾರಗಳು ನನ್ನ ಅಜೆಂಡಾದಲ್ಲಿ ಇವೆ. ಮೊದಲನೆಯದು ಅಸಮಾನತೆಗಳ ಅಧ್ಯಯನ. ಅಸಮಾನತೆ ಕುರಿತು ಸತ್ಯವನ್ನು ಆಧರಿಸಿದ, ಸಮಗ್ರ ದೃಷ್ಟಿಕೋನದ ಸಲಹೆ ಸರ್ಕಾರಕ್ಕೆ ದೊರೆತಿಲ್ಲ. ಅಸಮಾನತೆಗಳ ಬಗ್ಗೆ ವಿಶ್ಲೇಷಣೆ ಮಾಡುವುದು ಸುಲಭವಲ್ಲ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಬೇಕಿದ್ದರೆ, ಸಮಗ್ರ ಸ್ವರೂಪದ ಬೆಳವಣಿಗೆ ಸಾಧಿಸಬೇಕಿದ್ದರೆ ಈ ಪ್ರಕ್ರಿಯೆಗಳಿಂದ ಹೊರಗುಳಿದಿರುವ ಸಮುದಾಯಗಳು ಯಾವವು ಎಂಬುದು ತಿಳಿದಿರಬೇಕು. ಮತ್ತು ಅವು ಎಷ್ಟರಮಟ್ಟಿಗೆ ಹೊರಗುಳಿದಿವೆ ಎಂಬುದೂ ಗೊತ್ತಾಗಬೇಕು.
ಅದೇ ರೀತಿ ನಮ್ಮ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದಂತೆ ಕೆಲವು ಗುರಿಗಳ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ನಮ್ಮ ಪರಂಪರೆಯ ಬಗ್ಗೆ ಸಮಗ್ರ ಚಿತ್ರಣ ಏನು ಎಂಬುದನ್ನು ಸರ್ಕಾರದಲ್ಲಿ ಹೇಳುವ ವ್ಯಕ್ತಿ ಇದ್ದಾರೆ ಎಂದು ನನಗನಿಸುವುದಿಲ್ಲ. ನಮ್ಮ ಸುಮಾರು 100 ಸಾಂಸ್ಕೃತಿಕ ಮೈಲುಗಲ್ಲುಗಳ ವೈಶಿಷ್ಟ್ಯಗಳನ್ನು ಹೇಳುವ ವಿಚಾರದಲ್ಲಿ ಯೂರೋಪ್‌ನ ಮಟ್ಟವನ್ನು ನಾವು ಇನ್ನು ಹತ್ತು ವರ್ಷಗಳಲ್ಲಿ ತಲುಪಬಲ್ಲೆವಾ? ಇಂಥ ಕೆಲಸ ಮಾಡಲು ಬೇಕಿರುವ ವ್ಯಕ್ತಿಗಳು ನಿಯಾಸ್ ನಲ್ಲಿ ಇದ್ದಾರೆ.
ಉದಾಹರಣೆಗೆ ಸದ್ಧ್ಯ ಹಂಪಿಯನ್ನು ಡಿಜಿಟಲ್ ಮಾಧ್ಯಮದಲ್ಲಿ ಸೆರೆ ಹಿಡಿಯುವ ಕೆಲಸವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಇದಕ್ಕೆ ನಾವು ಐಐಟಿಗಳಿಂದ, ಸ್ವಯಂಸೇವಾ ಸಂಸ್ಥೆಗಳಿಂದ, ಸಾಂಸ್ಕೃತಿಕ ಸಂಘಟನೆಗಳಿಂದ ಅರ್ಹರನ್ನು ಕರೆಸಿಕೊಂಡಿದ್ದೇವೆ. ಈ ದೇಶದ ಸಾಂಸ್ಕೃತಿಕ ಆಯಾಮಗಳ ಅಧ್ಯಯನದಲ್ಲಿ ಇದೇ ಮೊದಲ ಬಾರಿಗೆ ಗಣ್ಯ ಮತ್ತು ಚುರುಕಿನ ವ್ಯಕ್ತಿಗಳನ್ನು ನಾವು ಒಗ್ಗೂಡಿಸಿದ್ದೇವೆ. ಈ ಕಾರ್ಯ ಒಂದು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ ಎಂಬ ಭರವಸೆ ಇದೆ. ಈ ಕೆಲಸವನ್ನು ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಂಸ್ಕೃತಿ ಇಲಾಖೆಯ ಜೊತೆಗೂಡಿ ಮಾಡುತ್ತಿದ್ದೇವೆ.
ಅದೇ ರೀತಿ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಕುರಿತು ಒಂದು ಗುಂಪು ಅಧ್ಯಯನ ನಡೆಸುತ್ತಿದೆ. ನಮ್ಮ ಸಂಶೋಧನೆಗಳು ಸಮಾನ ಮನಸ್ಕರ ಗಮನ ಸೆಳೆದಿದೆ. ಈ ವಿಷಯದ ಬಗ್ಗೆಯೂ ನಾವು ನೀತಿ ಆಯೋಗಕ್ಕೆ ಧೋರಣಾತ್ಮಕ ಸಲಹೆ ಕೊಡ ಬಲ್ಲೆವು.

*
ಹರಪ್ಪ ನಾಗರೀಕತೆಯ ಅವಶೇಷಗಳ ಮೂಲಕ ಸಾಧ್ಯವಾಗುವ ಪ್ರವಾಸೋದ್ಯಮ ಮತ್ತು ಶಿಕ್ಷಣವನ್ನು ನಾವು ನಿರ್ಲಕ್ಷಿಸಿದ್ದೇವೆ. ಪಾಕಿಸ್ತಾನದಲ್ಲಿರುವ ತಕ್ಷಶಿಲೆಗೆ ಭೇಟಿ ನೀಡಿದವರು, ಅದನ್ನು ಸಂರಕ್ಷಿಸಿದ ಮಾದರಿಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ.

ನಿಜ, ನಾವು ಗಾಂಧಿನಗರದ ಐಐಟಿಯವರ ಜೊತೆಗೂಡಿ ಕಛ್ ನ ಢೋಲಾವೀರಾ ದಲ್ಲಿರುವ ಅವಶೇಷಗಳಲ್ಲಿ ಈ ದಿಶೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆಧುನಿಕ ಉಪಗ್ರಹ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಲ್ಲಿ ಬಳಸಿಕೊಂಡಿದ್ದೇವೆ.

*
ಸರ್ಕಾರ, ಕಾರ್ಪೊರೇಟ್‌ ಕಂಪೆನಿಗಳು ಮತ್ತು ಜನಸಾಮಾನ್ಯರ ದೃಷ್ಟಿಯಲ್ಲಿ ನಿಯಾಸ್ ನ ಸ್ಥಾನ ಇನ್ನಷ್ಟು ಎತ್ತರಕ್ಕೆ ಏರಬೇಕಿದೆ. ಅಲ್ಲವೇ?


ದೇಶದ ಇಂದಿನ ಸ್ಥಿತಿಯಲ್ಲಿ ಅವಕಾಶದ ಕಿಟಕಿಗಳು ಇನ್ನೂ ತೆರೆದಿವೆ. ನಮ್ಮಧೋರಣೆಗಳ ಆಯ್ಕೆಗಳು ಸರಿಯಾಗಿದ್ದರೆ, ದೇಶ ಬೆಳೆಯುತ್ತದೆ. ಅದನ್ನು ಮಾಡದಿದ್ದರೆ ನಮ್ಮದು ಈಗಿರುವುದಕ್ಕಿಂತ ಹೆಚ್ಚು ಗೊಂದಲಗಳ ದೇಶವಾಗುತ್ತದೆ.

(
ಶಿವಾನಂದ ಕಣವಿ ಭೌತವಿಜ್ಞಾನಿ, ಹಿರಿಯ ಪತ್ರಕರ್ತ, ಟಿಸಿಎಸ್‌ನ ಮಾಜಿ ಉಪಾಧ್ಯಕ್ಷ)