Excerpts from ಡಿಜಿಟಲ್ ಕ್ರಾಂತಿ ಮತ್ತು ಭಾರತ and a short interview of mine
Sunday Supplement of Kannada Prabha June 12, 2016,
http://epaper.kannadaprabha.in/Article.aspx?eid=31848&articlexml=12062016101004#
http://epaper.kannadaprabha.in/Article.aspx?eid=31848&articlexml=12062016104007
ಇ-ಆಡಳಿತದ ಮೊದಲ ಘಟ್ಟ ಮುಟ್ಟಿದ್ದೇವೆ
ಭಾರತಕ್ಕೆ ಹೊಸ ಚೈತನ್ಯ ತುಂಬಿದೆ ಡಿಜಿಟಲ್ ಕ್ರಾಂತಿ. ಹಾಗೆಯೇ ಜಾಗತಿಕವಾಗಿ ಡಿಜಿಟಲ್ ಕ್ಷೇತ್ರದ ಹಲವು ಸಾಧನೆಗಳಿಗೆ ಭಾರತವೂ ಕಾಣ್ಕೆ ನೀಡಿದೆ. ಬೃಹತ್ ಗಾತ್ರದ ಕಂಪ್ಯೂಟರ್ ಕಾಲದಿಂದ ಎಲ್ಲ ಕೆಲಸಗಳೂ ಸ್ಮಾರ್ಟ್ ಫೋನ್ ಗಳಲ್ಲಿ ನಡೆಯುತ್ತಿರುವ ಈ ಕಾಲದ ವರೆಗೆ ತಂತ್ರಜ್ಞಾನ್ ಲೋಕದ ಬೆಳವಣಿಗೆಯನ್ನು ಶಿವಾನಂದ ಕಣವಿಯವರು ಕಂಡಿದ್ದಾರೆ. ಈ ಬೆಳವಣಿಗೆಗಳ ಹಲವು ಸಂಗತಿಗಳನ್ನು ಕುರಿತು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕ್ರಾಂತಿ ಕೊಟ್ಟ ಕೊಡುಗೆ ಏನು? ಅದರಿಂದ ಏನೆಲ್ಲ ಸಾಧ್ಯವಾಗಿದೆ ಎಂಬ ಬಗ್ಗೆ ಕಣವಿಯವರು ಇಲ್ಲಿ ಮಾತನಾಡಿದ್ದಾರೆ.
.
1.
ಡಿಜಿಟಲ್ ಭಾರತ
ಎಂದರೆ ಥಟ್ಟನೆ ನಿಮ್ಮ ಕಣ್ಣ ಮುಂದೆ ನಿಲ್ಲುವ ಚಿತ್ರ ಯಾವುದು?
ಕುಂಭ ಮೇಳದಲ್ಲಿ
ಭಸ್ಮ ದಿಂದ ಆಭೂಷಿತ ಒಬ್ಬ ಅರೆ ನಗ್ನ ಸಾಧು ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿರುವ ಚಿತ್ರ
2.
ಸಾಮಾನ್ಯ
ಭಾರತೀಯನಿಗೆ ಡಿಜಿಟಲ್ ಕ್ರಾಂತಿಯಿಂದ ನಿಜವಾಗಿಯೂ ಏನು ಸಿಗುತ್ತಿದೆ?
ವ್ಯಾಪಾರ, ವ್ಯವಹಾರ, ಕೈಗಾರಿಕೋದ್ಯಮ, ಕೃಷಿ, ಆಡಳಿತ, ಶಿಕ್ಷಣ, ಆರೋಗ್ಯ, ಮನೋರಂಜನೆ, ಪತ್ರಿಕೋದ್ಯಮ ಮುಂತಾದ ಅನೇಕ ರಂಗಗಳಲ್ಲಿ ಕಳೆದ
ಸುಮರು ೨೦ ವರ್ಷಗಳ ಹಿಂದೆ ಆರಂಭವಾದ ಡಿಜಿಟಲ್ ಕ್ರಾಂತಿಯಿಂದ ಅಪಾರ ಜನಹಿತದ ಬದಲಾವಣೆಗಳು
ಆಗಿವೆ ಆದರೆ ಮುಖ್ಯವಾಗಿ ೧೦೦ ಕೋಟಿಗಿಂತೂ ಹೆಚ್ಚು ಜನರನ್ನು ತಟ್ಟಿದ್ದು ಸಂವಹನ ಕ್ರಾಂತಿ ಎಂದರೆ
ಉತ್ಪ್ರೇಕ್ಷೆ ಆಗಲಾರದು
3. ಭಾರತದಲ್ಲಿ ಆದ ತಂತ್ರಜ್ಞಾನದ ಕ್ರಾಂತಿ ನಿಜಕ್ಕೂ ಯಾವ ರೀತಿಯ ಬದಲಾವಣೆಗೆ ಕಾರಣವಾಗಿದೆ?
ಆಡಳಿತ ಜನರತ್ತ
ಬರಲು ಸಾಧ್ಯವಾಗಿದೆ,
ಆರೋಗ್ಯ ಕ್ಷೇತ್ರದ
ಪ್ರತಿಯೊಂದು ಶಾರೀರಿಕ ಪರೀಕ್ಷೆಗಳೂ ಇಂದು ಡಿಜಿಟಲ್ ತಂತ್ರಜ್ಞಾನವನ್ನು ಅವಲಂಬಿಸಿವೆ, ವೈಜ್ಞಾನಿಕ ಅನುಸಂಧಾನಕ್ಕೆ ಅನೇಕ ಹೊಸ ಉಪಕರಣಗಳು
ಲಭ್ಯವಾಗಿವೆ,
ಬ್ಯಾಂಕು ಮತ್ತು
ಮಾರುಕಟ್ಟೆಗಳ ವ್ಯವಹಾರ ತ್ವರಿತ ಮತ್ತು ಪಾರದರ್ಶಕ ವಾಗಿವೆ, ಎಲ್ಲ ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಪ್ರಕಾಶನ
ರಂಗಗಳಲ್ಲಿ ಸ್ಫೋಟವೇ ಆಗಿದೆ.
ಸಂಕ್ಷಿಪ್ತವಾಗಿ
ಹೇಳಬೆಕೆಂದರೆ ಭಕ್ತಿ ಚಳುವಳಿ ಹೇಗೆ ಮಾನವ ಮತ್ತು ಅವನ ದೇವರ ನಡುವೆ ಅಡ್ಡಿಯುಂಟು ಮಾಡುತ್ತಿದ್ದ
ಮಧ್ಯಸ್ಥ ಪೂಜಾರಿಗಳನ್ನು ದಾಟಿ ಮುಂದೆ ಹೋಯಿತೋ ಅದೇ ತರಹ ಮಾನವ ವ್ಯವಹಾರಗಳಲ್ಲಿ ಮಧ್ಯಸ್ಥರನ್ನು
ಅನಾವಶ್ಯಕ ಮಾಡಿದೆ ಡಿಜಿಟಲ್ ತಂತ್ರಜ್ಞಾನ. ಅದರೊಂದಿಗೆಯೇ ಹಳೆಯ ಮಾನವ ಕರುಳು
ಬಌಗಳಾದ ಕುಲ,
ಜಾತಿ, ಊರು, ರಾಷ್ಟ್ರಮುಂತಾದವುಗಳ ಸಂಕುಚಿತ ಮೇರೆಗಳನ್ನು ಮೀರಿ
ಹೊಸ ಕರುಳು ಬಌಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು ಡಿಜಿಟಲ್ ತಂತ್ರಜ್ಞಾನ ನಿರ್ಮಾಣ ಮಾಡಿದೆ.
4. ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನವೇನು? ಏಕೆ?
ಡಿಜಿಟಲ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಅನೇಕ
ಭಾರತೀಯರು ಅಪಾರ ಮೂಲಭೂತ ಕೊಡುಗೆಗಳನ್ನು ಕೊಟ್ಟಿದ್ದಾರೆ. ಮೂಲ ಪುಸ್ತಕವನ್ನು,( Sand to Silicon: The amazing story
of digital technology) ಬರೆಯುವದಕ್ಕೆ
ಪ್ರಮುಖ ಪ್ರೇರಣೆಗಳಲ್ಲಿ ಇಂಥ ಭಾರತೀಯರನ್ನು ಗುರುತಿಸುವದೂ ಆಗಿತ್ತು. ಇದಲ್ಲದೆ ವೈದ್ಯಕೀಯ, ಜೈವಿಕ,
ಬಾಹ್ಯಾಕಾಶ, ಪರಮಾಣು ಮತ್ತಿತರ ಕ್ಷೇತ್ರಗಳಲ್ಲಿ ಮಂಚೂಣಿಯ ಕಾರ್ಯವನ್ನು ಭಾರತೀಯ ವಿಜ್ಞಾನಿ ಮತ್ತು
ತಂತ್ರಜ್ಞಾನಿಗಳು ನಮ್ಮ ದೇಶದಲ್ಲಿ ಮತ್ತು ಜಗತ್ತಿನಾದ್ಯಂತ ಮಾಡುತ್ತಿದ್ದಾರೆ.
5.
ಆಡಳಿತದಲ್ಲಿ
ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಏನಾಗಬೇಕಿದೆ?
ಈಗ ಅನೇಕ
ಸಾರ್ವಜನಿಕ ಸೇವೆಗಳನ್ನು ಕಚೇರಿ-ಕಾರ್ಯಾಲಯಗಳಿಗೆ ಹೋಗಿ ಗಂಟೆಗಟ್ಟಲೇ ಕಾಲವ್ಯಯಿಸಿ ನಂತರ ಪಡೆದುಕೊಳ್ಳ
ಬೇಕಾಗಿಲ್ಲ. ಆನೇಕ ಸರಕಾರಿ ದಾಖಲೆಗಳು ಮತ್ತು ಸೂಚನೆಗಳು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್
ಮೂಲಕ ಪಡೆಯಬಹುದು. ಕೇಂದ್ರ, ರಾಜ್ಯ ಮತ್ತು ಮಹಾಪಾಲಿಕೆಗಳವರೆಗೆ ಸುಮಾರು ಎಲ್ಲಾ ಸರಕಾರೀ ಸಂಸ್ಥೆ ಅಥವಾ ನಿಗಮಗಳು ಅಂತರ್
ಜಾಲದಲ್ಲಿ ಉಪಸ್ಥಿತವಾಗಿವೆ. ಒಂದು ದೃಷ್ಟಿಯಿಂದ ನಾವು ಇ-ಆಡಳಿತದ ಮೊದಲ ಘಟ್ಟವನ್ನು ಮುಟ್ಟಿದ್ದೇವೆಯೆಂದು
ಹೇಳಲು ಚಿಂತೆಯಿಲ್ಲ. ಕೆಲ ಆಡಳಿತ ಕ್ಷೇತ್ರಗಳಲ್ಲಿ ಭಾರತ ಇಂದು ಜಾಗತಿಕವಾಗಿ ಮಂಚೂಣಿಯಲ್ಲಿದೆ
ಮತ್ತು ನಮ್ಮ ಇ-ಆಡಳಿತದ ಸಾಧನೆಗಳನ್ನು ಮಾದರಿಯೆಂದು ಅಧ್ಯಯನ
ಮಾಡಲು ಅನೇಕ ದೇಶಗಳಿಂದ ಬರುವ ತಂಡಗಳನ್ನು ನಾನು ಟಾಟಾ
ಕನ್ಸಲ್ಟನ್ಸಿ ಸರ್ವಿಸಸ್ (TCS) ಯಲ್ಲಿ ಉಪಾಧ್ಯಕ್ಷನಾಗಿ ೧೦ ವರುಷ ಕೆಲಸ ಮಾಡಿದಾಗ
ಅನೇಕ ಬಾರಿ ಭೇಟಿಯಾಗಿದ್ದೇನೆ.
ಈಗ ನಾವು ಮುಂದಿನ
ಘಟ್ಟಕ್ಕೆ ಮುನ್ನಡೆಯ ಬೇಕು. ಅದೆಂದರೆ ನಮ್ಮ ಇ-ಆಡಳಿತ ಜಾಲತಾಣಗಳ ಸಾರ್ವಜನಿಕ ಆಡಿಟ್ ಆಗಬೇಕು
ಅವುಗಳ ಕುಂದು ಕೊರತೆಗಳನ್ನು ನಿವಾರಿಸಿ ಪುನರ್ ವಿನ್ಯಾಸ ಮಾಡಬೇಕು.
ಅತಿ ಮುಖ್ಯ ವಿಷಯವೆಂದರೆ ನಮ್ಮ ಆಡಳಿತದ ಮೂಲ
ಸೂತ್ರಗಳು ಮತ್ತು ನಿಯಮಗಳೆಲ್ಲ ೧೮೫೭ರ ಕ್ರಾಂತಿಯ ನಂತರ ಬ್ರಿಟಿಶ್ ವಸಾಹತುವಾದಿಗಳು ಮಾಡಿದ್ದವು.
ಇನ್ನೂ ವರೆಗೆ ಅದೇ ವಸಾಹತುವಾದಿ ಆಡಳಿತದ ಚೌಕಟ್ಟಿನಲ್ಲಿ ನಮ್ಮ ಆಡಳಿತ ಸಿಕ್ಕು ಬಿದ್ದಿದೆ.
ಆದ್ದರಿಂದ ಇಂಥ ವಸಾಹತುವಾದಿ ಆಡಳಿತ ಸೂತ್ರ ನಿಯಮಗಳನ್ನು ಕಂಪ್ಯೂಟರ್ ಕರಿಸುವದಕ್ಕಿಂತ ನಾವೆಲ್ಲ
ಗಂಭೀರವಾಗಿ ಆದಳಿತ ಸೂತ್ರಗಳನ್ನು ಪುನರಾವಲೋಕಿಸಿ ಕಂಪ್ಯೂಟರ್ ಕರಣದ ಜೊತೆಗೆ ಅವುಗಳನ್ನು ಜನಪರ
ಮಾಡುವ ಅತ್ಯಾವಶ್ಯಕತೆ ಇದೆ.
No comments:
Post a Comment