Friday, August 22, 2025

'His Life, Words And Deeds Were Silent Teachers'

By SHIVANAND KANAVI

 

Appeared in rediff.com                                   July 02, 2025 16:26 IST

Shivanand Kanavi remembers his father, the eminent Kannada poet Nadoja Chennaveera Kanavi.



IMAGE: Chennaveera Kanavi, the eminent Kannada poet, on an early morning walk on the Karnatak University Dharwad campus. Photograph: Kedarnath

 

To say in a few words about Nadoja Chennaveera Kanavi, -- Apparu for us, his and Santadevi's children, -- is very difficult, but I will try.

He passed away on February 16, 2022. June 28 being his birthday, he would have been 97 now.

He lived a full and creative life and, in many ways, he was an ideal father. Now that I too have grown up children and even college going grandchildren, I know how in many ways I fall short of the standards Apparu set for fatherhood.

He was strict and helpful when we were children but as I grew up and started going to Karnatak College in Dharwad, his attitude totally changed. He became a friend.

He never imposed his religious, political or personal views on me in any way.

I was and am an atheist. He was an admirer of Basavanna and other Vachanakaras of the 12th century. He would do his ishtalinga pooja in the morning in the privacy of his pooja room. He never went to a temple to worship nor did any homahavana etc.

He at the most cautioned in me in my youth if I was making some radical choices in career but was always democratic, liberal and non-intrusive.

He never spent time preaching me about life and values. His life, his words and deeds were silent teachers.

We used to enjoy the first recitation of most of his new poems as soon as he finished writing them. But when his creative process was on, he could not be disturbed and he would be in his intellectual cocoon, meditating his words and lines during his daily morning and evening walks or pottering around his home garden.

He had a great sense of humour and was an excellent mimic. He used to take us in our childhood to all the morning shows of English comedies at the Dharwad cinema talkies on Sundays. We saw many Laurel & Hardy, Jerry Lewis films with him.

He enjoyed them perhaps even more than us. Comedians Narasimharaju and Balakrishna of Kannada films were his favourites.

Even as he grew older he did not lose his love of comedy and even slapstick. He used to regularly watch television comedies like"Papa Pandu. We used to be amused by his child-like enjoyment of slapstick.https://newads.rediff.com/rediffadserver/www/delivery/lg.php?bannerid=13359&campaignid=3689&zoneid=385&source=_blank&loc=https%3A%2F%2Fwww.rediff.com%2Fnews%2Fcolumn%2Fmy-apparu-nadoja-chennaveera-kanavi%2F20250702.htm&cb=b5829bec1c

He was certainly a unique person in my experience because of his integral personality. His inner world and outer world were one.

He was very sensitive and kind hearted towards all. Family members, friends, strangers, even plants and animals.

He had the amazing empathy and circumspection to not to lose his balance in evaluating anything or person. At the same time he genuinely appreciated the positive elements and talents and creativity in others while ignoring their accompanying weaknesses.

He was very civil and polite and without a shade of arrogance but also had a quiet self confidence.

Not only in his external public behaviour but also in front of us, within the family. They were not a facade for him. It was his inner nature too.

I have seen enough creative people in arts, literature, science and technology who could rarely appreciate and admire their peers while thinking no end of themselves.

He had none of that publicly or privately. That requires a great amount of integrity, balance and self confidence and a secure personality.

He was a poet who created and lived in his poetic world.

Many people think he never got angry. They are wrong. He used to get very angry with any shoddy work or badly organised event or poorly proofed copy.

I was lucky that I spent about a year with him just before Covid and discussed his Samagra Kavya as well as Vachana Sahitya.

I miss him. I wish I had spent more time discussing literature; his and others. He lives on among not only in the memories of his family and friends but also in all lovers of Kannada poetry.

Shivanand Kanavi, a frequent contributor to Rediff.com, is a theoretical physicist, business journalist and former VP at TCS.
He has authored the award winning book Sand to Silicon: The Amazing Story Of Digital Rechnology (Tata McGraw Hill, 2004, Rupa Books 2007) and edited Research by Design: Innovation and TCS (Rupa Books 2007).

 


ನನ್ನ ಅಪ್ಪಾರು, ನಾಡೋಜ ಚೆನ್ನವೀರ ಕಣವಿ

 "ನನ್ನ ಅಪ್ಪಾರು, ನಾಡೋಜ ಚೆನ್ನವೀರ ಕಣವಿ"

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಪುಟ್ಟ ಲೇಖನ June 27 2025



 (ಜೂನ್ ೨೮, ೧೯೨೮ - ಫ಼ೆಬ್ರವರಿ ೧೬, ೨೦೨೨)


ನನ್ನ ಅಪ್ಪಾ ನಾಡೋಜ ಚೆನ್ನವೀರ ಕಣವಿಯವರ ಬಗ್ಗೆ ಕೆಲವು ಮಾತುಗಳಲ್ಲಿ ಹೇಳುವುದು, ಬಹಳ ಕಷ್ಟ.

ಆದರೂ ನಾನು ಪ್ರಯತ್ನಿಸುತ್ತೇನೆ. 

ಜೂನ್ ೨೮ ಅವರ ಜನ್ಮದಿನವಾದ್ದರಿಂದ, ಇವತ್ತು ಅವರು ೯೭ ವರ್ಷದವರಾಗಿರುತ್ತಿದ್ದರು. 

ಅಪ್ಪಾರು  ಪೂರ್ಣ ಸೃಜನಶೀಲ ಜೀವನವನ್ನು ಅನುಭವಿಸಿದರು. 

ಅನೇಕ ವಿಧದಲ್ಲಿ ಆದರ್ಶ ತಂದೆಯಾಗಿದ್ದರು. ಈಗ ನನಗೂ ಬೆಳೆದ ಮಕ್ಕಳು ಮತ್ತು ಕಾಲೇಜಿಗೆ ಹೋಗುವ ಮೊಮ್ಮಕ್ಕಳಿದ್ದಾರೆ. ಅವರು ತಂದೆತನಕ್ಕೆ ನೀಡಿದ ಮಾನದಂಡಗಳಿಗೆ ನಾನು ತಲುಪಿಲ್ಲ ಎಂದು ತಿಳಿದಿದ್ದೇನೆ.

ನಾವು ಮಕ್ಕಳಾಗಿದ್ದಾಗ ಅವರು ಕಟ್ಟುನಿಟ್ಟಾಗಿದ್ದರು, ನಮ್ಮ ಶಾಲಾ ವಿದ್ಯಾಭ್ಯಾಸಕ್ಕೆ ಸಹಾಯಕರೂ ಆಗಿದ್ದರು. ನಾನು ಬೆಳೆದು 

ಕರ್ನಾಟಕ ಕಾಲೇಜಿಗೆ ಹೋಗಲು ಆರಂಭಿಸಿದಾಗ, (೧೯೬೮) ಅವರ ವರ್ತನೆ ಸಂಪೂರ್ಣವಾಗಿ ಬದಲಾಯಿತು. ಅವರು ಸ್ನೇಹಿತರಾದರು.

ಅವರು ತಮ್ಮ ಧಾರ್ಮಿಕ, ರಾಜಕೀಯ ಅಥವಾ ವೈಯಕ್ತಿಕ ಅಭಿಪ್ರಾಯಗಳನ್ನು ನನ್ನ ಮೇಲೆ ಯಾವತ್ತೂ ಬಲವಂತವಾಗಿ ಹೇರಲಿಲ್ಲ. ನಾನು ನಿರೀಶ್ವರವಾದಿ ಅವರು ವಚನಕಾರರನ್ನು ಮತ್ತು ಬಸವಣ್ಣನನ್ನು ಮೆಚ್ಚಿಕೊಂಡವರು. ಎಂದೂ ಗುಡಿಗಳಿಗೆ ಪೂಜೆ ಪುನಸ್ಕಾರ ಮಾಡಲು ಹೋಗಲಿಲ್ಲ ಮನೆಯಲ್ಲಿಯೆ ಪೂಜಾ ಕೊಠಡಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದರು. ಮತ್ತಾವ ಪೂಜೆ, ಹೋಮ, ಹವನ ಮುಂತಾದವು ಅವರಿಗೆ ಬೇಕಾಗಿದ್ದಿಲ್ಲ.

ಜೀವನದಲ್ಲಿ ನನ್ನ ಅನೇಕ ಆಯ್ಕೆಗಳನ್ನು ಎಂದೂ ಪ್ರಶ್ನಿಸಲಿಲ್ಲ. ಯಾವಾಗಲೂ  ಉದಾರ ಮತ್ತು ಹಸ್ತಕ್ಷೇಪ ಮಾಡದ ವ್ಯಕ್ತಿಯಾಗಿದ್ದರು. ಉಪದೇಶ ಮಾಡಲು ಸಮಯ ಕಳೆಯಲಿಲ್ಲ. ಅವರ ಸ್ವಂತ ಜೀವನ, ಮಾತು 

ಮತ್ತು ಕ್ರಿಯೆಗಳ ಮೂಲಕ ನಮ್ಮ ಮಾರ್ಗದರ್ಶಕರಾಗಿದ್ದರು.

ಅವರು ತಮ್ಮ ಹೊಸ ಕವಿತೆಗಳನ್ನು ರಚಿಸಿದಾಗ,  ನಮ್ಮ ಮುಂದೆ ಓದಿ ತೋರಿಸುತ್ತಿದ್ದರು. ಆದರೆ ಅವರ ಸೃಜನಾತ್ಮಕ ಪ್ರಕ್ರಿಯೆ ನಡೆಯುತ್ತಿರುವಾಗ, ಅವರನ್ನು ಭಂಗಪಡಿಸಲಾಗುತ್ತಿರಲಿಲ್ಲ. ಅವರು ತಮ್ಮದೇ ಆದ ಬೌದ್ಧಿಕ ಜಗತ್ತಿನಲ್ಲಿ ಮುಳುಗಿರುತ್ತಿದ್ದರು.  ಬೆಳಗ್ಗೆ ಮತ್ತು ಸಂಜೆಯ ನಡಿಗೆ ಅವರು ಎಂದೂ ತಪ್ಪಿಸಲಿಲ್ಲ. ಆ ಸಮಯದಲ್ಲಿ ಅಥವಾ ಅಥವಾ ಅವರಿಗೆ ಅತಿ ಪ್ರಿಯವಾದ ಮನೆಯ ತೋಟದಲ್ಲಿ ಸುತ್ತುತ್ತಾ, ತಾವು  ರಚಿಸುತ್ತಿರುವ ಸಾಲುಗಳನ್ನು ಧ್ಯಾನಿಸುತ್ತಿದ್ದರು.

 

ಅವರಿಗೆ ಉತ್ತಮ ಹಾಸ್ಯಭಾವವಿತ್ತು ಮತ್ತು ಅತ್ಯುತ್ತಮ ಅನುಕರಣೆ ಮಾಡಿ ನಮ್ಮನ್ನು ನಗಿಸುತ್ತಿದ್ದರು. ನಮ್ಮ ಬಾಲ್ಯದಲ್ಲಿ ಧಾರವಾಡದ ಸಿನಿಮಾ ಟಾಕೀಸುಗಳಲ್ಲಿ ಆಗ ಭಾನುವಾರ ಬೆಳಗ್ಗೆ ತೋರಿಸುತ್ತಿದ್ದ ಇಂಗ್ಲಿಷ್ ಹಾಸ್ಯಚಿತ್ರಗಳನ್ನು ನೋಡಲು ಕರೆದೊಯ್ಯುತ್ತಿದ್ದರು. ಕನ್ನಡ ಚಿತ್ರರಂಗದ ನರಸಿಂಹರಾಜು-ಬಾಲಕೃಷ್ಣರು ಅವರಿಗೆ ಪ್ರೀತಿ. ನಾವು ಅವರೊಂದಿಗೆ ಅನೇಕ ಲಾರೆಲ್ & ಹಾರ್ಡಿ, ಜೆರ್ರಿ ಲೂಯಿಸ್ ಚಿತ್ರಗಳನ್ನು ನೋಡಿದ್ದೇವೆ. ಅವರು ಆ ಚಿತ್ರಗಳನ್ನು ನಮಗಿಂತಲೂ ಹೆಚ್ಚು ಆನಂದಿಸುತ್ತಿದ್ದರು. ವಯಸ್ಸಾದ ನಂತರವೂ ಅವರು ಸ್ಲ್ಯಾಪ್ ಸ್ಟಿಕ್ ಹಾಸ್ಯದ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. "ಪಾಪಾ ಪಾಂಡು" ಮುಂತಾದ ಟಿವಿ ಹಾಸ್ಯಕಾರ್ಯಕ್ರಮಗಳನ್ನು ಅವರು ನಿಯಮಿತವಾಗಿ ನೋಡುತ್ತಿದ್ದರು. ಅಂತಹ ಹಾಸ್ಯದಲ್ಲಿ ಅವರ ಬಾಲಕನಂತಹ ಆನಂದ ನಮಗೂ ಮನೋರಂಜನೆ ನೀಡುತ್ತಿತ್ತು.

ನನ್ನ ಅನುಭವದಲ್ಲಿ ಅವರು ನಿಜವಾಗಿಯೂ ವಿಶಿಷ್ಟ ವ್ಯಕ್ತಿಯಾಗಿದ್ದರು. ಏಕೆಂದರೆ ಅವರು ಸಂಪೂರ್ಣವಾಗಿ ಸಮಷ್ಟಿ ವ್ಯಕ್ತಿತ್ವದವರಾಗಿದ್ದರು. 

ಅವರ ಆಂತರಿಕ ಮತ್ತು ಬಾಹ್ಯ ಜಗತ್ತು ಒಂದಾಗಿದ್ದವು. ಅವರು ಎಲ್ಲರ ಕಡೆಗೂ ಸೂಕ್ಷ್ಮ ಮತ್ತು ಸಹೃದಯರಾಗಿ ನಡೆದುಕೊಳ್ಳುತ್ತಿದ್ದರು. ಕುಟುಂಬದ ಸದಸ್ಯರು, ಸ್ನೇಹಿತರು, ಅಪರಿಚಿತರು, ಸಸ್ಯಗಳು, ಪ್ರಾಣಿಗಳನ್ನು ಒಳಗೊಂಡಂತೆ ಎಲ್ಲರ ಕಡೆಗೂ ಅವರ ಸಹಾನುಭೂತಿ ಇತ್ತು.

ಯಾವುದೇ ವಿಷಯ ಅಥವಾ ವ್ಯಕ್ತಿಯನ್ನು ಮೌಲ್ಯಮಾಪನ ಮಾಡುವಾಗ ಸಮತೋಲನವನ್ನು ಕಳೆದುಕೊಳ್ಳದ ಅದ್ಭುತ ಸಮಗ್ರತೆ ಅವರಲ್ಲಿತ್ತು. ಅದೇ ಸಮಯದಲ್ಲಿ, ಇತರರ ದುರ್ಬಲತೆಗಳನ್ನು ನಿರ್ಲಕ್ಷಿಸುತ್ತಾ, ಅವರಲ್ಲಿರುವ ಧನಾತ್ಮಕ ಅಂಶಗಳು, ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅವರು ಧಾರಾಳವಾಗಿ ಮೆಚ್ಚುತ್ತಿದ್ದರು. 

ಸಾರ್ವಜನಿಕ ನಡವಳಿಕೆಯಲ್ಲಿ ಮಾತ್ರವಲ್ಲ, ಕುಟುಂಬದೊಳಗೆ ನಮ್ಮ ಮುಂದೂ ಅತ್ಯಂತ ಅಹಂಕಾರರಹಿತರಾಗಿದ್ದರು. ವಿನಯ ಮತ್ತು ವಿವೇಕ ಅವರಿಗೆ ಬಾಹ್ಯಾಡಂಬರವಾಗಿರಲಿಲ್ಲ; ಅದು ಅವರ ಆಂತರಿಕ ಸ್ವಭಾವವೂ ಆಗಿತ್ತು.

ಕಲೆ, ಸಾಹಿತ್ಯ ಮತ್ತು ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರದಲ್ಲಿ ನಾನು ಅನೇಕ ಸೃಜನಶೀಲ ವ್ಯಕ್ತಿಗಳನ್ನು ನೋಡಿದ್ದೇನೆ, ಅವರು ಇತರರನ್ನು ಮೆಚ್ಚುವುದು ಅಪರೂಪ.  ಹೆಚ್ಚು ಜನ ಹೊರಗೆ ನಾಗರಿಕರಾಗಿ ಮತ್ತು ನಮ್ರರಾಗಿ ನಟಿಸುತ್ತಾರೆ, ಆದರೆ ಖಾಸಗಿಯಾಗಿ ತಮ್ಮ ಸಮಾನರ ಬಗ್ಗೆ ಅಸೂಯೆ ಅಥವಾ ನಕಾರಾತ್ಮಕತೆಯನ್ನು ಹೊಂದಿರುತ್ತಾರೆ. ಅಪ್ಪಾರಲ್ಲಿ ಇದೆಲ್ಲವೂ ಒಂದು ಚೂರೂ ಇರಲಿಲ್ಲ—ಸಾರ್ವಜನಿಕವಾಗಿಯೂ ಇಲ್ಲ, ಖಾಸಗಿಯಾಗಿಯೂ ಇಲ್ಲ. ಅಪಾರ ಸಮಗ್ರತೆ, ಸಮತೋಲನ, ನಮ್ರ ಆತ್ಮವಿಶ್ವಾಸ ಮತ್ತು ಸುರಕ್ಷಿತ ವ್ಯಕ್ತಿತ್ವ ಅವರ ಮೂಲವಾಗಿದ್ದವು.  ಸಾಹಿತ್ಯಿಕವಾಗಿ ಅನೇಕ ಗಾಳಿ ಆಂದೋಲನೆಗಳು ಬಂದು ಹೋದರೂ ಅವರು ಸ್ವಂತ ಮಾರ್ಗ ಮತ್ತು ಅನ್ವೇಷಣೆಯನ್ನು ಬಿಟ್ಟು ಕೊಟ್ಟು ಸಮಕಾಲೀನ ಪ್ರವಾಹದಲ್ಲಿ ಕೊಚ್ಚಿ ಹೋಗಲಿಲ್ಲ. 

ಅವರು ಅಪರೂಪದ ವ್ಯಕ್ತಿಯೂ ಮತ್ತು ಅಪರೂಪದ ಭಾವಜೀವಿಯೂ ಆಗಿದ್ದರು. ತಮ್ಮ ಕಾವ್ಯಾತ್ಮಕ ಜಗತ್ತನ್ನು ಸೃಷ್ಟಿಸಿ, ಅದರಲ್ಲಿ ಕೊನೆಯ ವರೆಗೂ ಬಾಳಿದರು.

ಅನೇಕರು ಕಣವಿಯವರಿಗೆ ಕೋಪವೇ ಬರುವದಿಲ್ಲ ಎಂದು ಭಾವಿಸುತ್ತಾರೆ. ಇದು ತಪ್ಪು. ಯಾವುದೇ ಕಳಪೆ ಕೆಲಸ, ಕೆಟ್ಟದಾಗಿ ಆಯೋಜಿಸಲಾದ ಕಾರ್ಯಕ್ರಮ ಅಥವಾ ದೋಷಪೂರಿತ ಮುದ್ರಿತ ಪ್ರತಿಯನ್ನು ನೋಡಿದಾಗ ಅವರು ತೀವ್ರ ಕೋಪಗೊಳ್ಳುತ್ತಿದ್ದರು.

ಕೋವಿಡ್ ಮಹಾಮಾರಿಗಿಂತ ಮೊದಲು ನಾನು ಅವರೊಂದಿಗೆ ಒಂದು ವರ್ಷ ಕಳೆದದ್ದು ನನ್ನ ಅದೃಷ್ಟ. ಆ ಸಮಯದಲ್ಲಿ ನಾನು ಅವರ "ಸಮಗ್ರ ಕಾವ್ಯ" ಮತ್ತು ಶರಣರ ಸುಮಾರು ೨೦೦೦ ವಚನಗಳನ್ನು ಅವರ ಜತೆ ಓದಿ ಚರ್ಚಿಸಿದೆ. 

ಇನ್ನೂ ಸಮಯ ಸಿಕ್ಕಿದ್ದರೆ..... ಎಂದು ಈಗ ಹಳಹಳಿಸುತ್ತೇನೆ ಆದರೆ ಅವರ ಬಾಳ ಸಂಗಾತಿ, ನನ್ನ ಅವ್ವ, ಶಾಂತಾದೇವಿ ಯವರನ್ನು ೨೦೨೦ ರಲ್ಲಿ ಕಳೆದುಕೊಂಡ ಮೇಲೆ ಅವರು ಬಹು ಬೇಗ ಕ್ಷೀಣರಾದರು.

ಅವರು ಎಂದೆಂದಿಗೂ ನಮ್ಮೊಡನೆ ಅವರ ಅಭಿಮಾನಿಗಳೊಡನೆ ಮತ್ತು ಎಲ್ಲ ಕನ್ನಡ ಕಾವ್ಯ ಪ್ರೇಮಿಗಳೊಡನೆ ಇರುವವರು.


ಶಿವಾನಂದ ಕಣವಿ

(ಕಣವಿಯವರ ಜ್ಯೇಷ್ಟ ಪುತ್ರ,

ಸಧ್ಯ ನಿಯಾಸ್ನಲ್ಲಿ ಅತಿಥಿ ಪ್ರಾಧ್ಯಾಪಕ

ಮಾಜಿ ಉಪಾಧ್ಯಕ್ಷ ಟಾಟಾ ಸಮೂಹದ ಟಿ ಸಿ ಎಸ್.)