Saturday, June 13, 2015

Interview with Desh Deshpande

Interview with Desh Deshpande about the fast growing Sand Box of Deshpande Foundation in Hubballi published in Prajavani on May 27, 2015

http://t.co/X1OLzMyrqQ

ಉದ್ಯಮಶೀಲತೆ ಸ್ಯಾಂಡ್‌ಬಾಕ್ಸ್‌ದೀಕ್ಷೆ





Wed, 05/27/2015 - 01:00
http://www.prajavani.net/sites/default/files/article_images/2015/05/26/MMMMMMM_0.jpg
http://www.prajavani.net/sites/default/files/article_images/2015/05/26/WWWWWWWW.jpg
ಯುವ ಜನಾಂಗದಲ್ಲಿ ಸ್ಥಳೀಯ ನಾಯಕತ್ವ  ಮತ್ತು ಸಾಮಾಜಿಕ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ ಗುರುರಾಜ ದೇಶಪಾಂಡೆ ಮತ್ತು ಜಯಶ್ರೀ ದೇಶಪಾಂಡೆ 1996ರಲ್ಲಿ ಹುಟ್ಟು ಹಾಕಿದ ದೇಶಪಾಂಡೆ ಪ್ರತಿಷ್ಠಾನವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಭಾರಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದೆ. ಹೊಸ ಆಲೋಚನೆಗಳ ಯುವ ಜನರಿಗೆ ವೇದಿಕೆ ಒದಗಿಸಲು ಸ್ಯಾಂಡ್‌ಬಾಕ್ಸ್‌ಎಂಬ ಯೋಜನೆ ರೂಪಿಸಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಈಗಾಗಲೇ ನಿಧಾನವಾಗಿ ಪರಿಣಾಮ ಕಾಣಿಸಿಕೊಳ್ಳತೊಡಗಿದೆ ಎಂಬುದನ್ನುಶಿವಾನಂದ ಕಣವಿ ಇಲ್ಲಿ ಅನಾವರಣ ಗೊಳಿಸಿದ್ದಾರೆ.

*ಏನಿದು ಸ್ಯಾಂಡ್‌ ಬಾಕ್ಸ್‌’?  ಇದರ ಉದ್ದೇಶಗಳೇನು?
ದೇಶಪಾಂಡೆ: ವಿದ್ಯಾರ್ಥಿಗಳಿಗೆ ಪರಿಪೂರ್ಣ ಜ್ಞಾನ, ವ್ಯವಹಾರ ಮತ್ತು ಮಾರುಕಟ್ಟೆ ಕೌಶಲ ತರಬೇತಿ ನೀಡಿ ಅವರನ್ನು ಸಾಮಾಜಿಕ ಉದ್ಯಮಶೀಲರನ್ನಾಗಿ ರೂಪಿಸುವ ಉದ್ದೇಶದಿಂದ ಆರಂಭಿಸಿದ ಯೋಜನೆ ಸ್ಯಾಂಡ್‌ಬಾಕ್ಸ್‌’. ಸ್ಥಳೀಯ ನಾಯಕತ್ವ ರೂಪಿಸುವುದು ಮತ್ತು ವಿನೂತನ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಉತ್ತೇಜಿಸುವುದು ಈಯೋಜನೆಯ ಮುಖ್ಯ ಧ್ಯೇಯ.
ನಿರುದ್ಯೋಗ ನಮ್ಮ ದೇಶದ ದೊಡ್ಡ ಸಮಸ್ಯೆ. ಲಕ್ಷಾಂತರ ರೂಪಾಯಿ ಸುರಿದು ಪದವಿ ಪಡೆದರೂ ಸಿಗುವ ಸಂಬಳ ಅತ್ಯಲ್ಪ. ಕಾಲೇಜು ವಿದ್ಯಾರ್ಥಿಗಳು, ಪದವೀಧರರಿಗೆ ಇಷ್ಟದ ಕ್ಷೇತ್ರದಲ್ಲಿ ವೃತ್ತಿ ಕೌಶಲ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಬದುಕು  ರೂಪಿಸುವ ಕೆಲಸದಲ್ಲಿ ಪ್ರತಿಷ್ಠಾನ ತೊಡಗಿದೆ.
ಪ್ರತಿ ವರ್ಷ ಕನಿಷ್ಠಮೂರು ಸಾವಿರದಂತೆ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಾಮಾಜಿಕ ಉದ್ಯಮಿಗಳನ್ನಾಗಿ ರೂಪಿಸಿದ್ದೇವೆ.
* ಇಂತಹ ಅನೇಕ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿವೆ.  ಅವುಗಳಿಗಿಂತ   ಸ್ಯಾಂಡ್‌ಬಾಕ್ಸ್‌ ಹೇಗೆ ವಿಭಿನ್ನ?
ಸ್ಯಾಂಡ್‌ಬಾಕ್ಸ್‌ ಸಾಮಾಜಿಕ ವಿಶ್ವವಿದ್ಯಾಲಯದಂತೆ ಕೆಲಸ ಮಾಡುತ್ತಿದೆ. ಇಲ್ಲಿ ಕ್ಲಾಸ್‌ ರೂಂ ಕಲಿಕೆಗಿಂತ ಸುತ್ತಲಿನ ಸಮಾಜ, ಪರಿಸರದಿಂದ ಕಲಿಕೆ ಹೆಚ್ಚು. ಕಲಿಯುವ ಮತ್ತು ಕಲಿಸುವ ಕೆಲಸ ನಿರಂತರ ನಡೆದಿರುತ್ತದೆ. ಸಮಾಜಕ್ಕಿಂತ ದೊಡ್ಡ ವಿಶ್ವವಿದ್ಯಾಲಯ ಮತ್ತು ಪ್ರಯೋಗಾಲಯ ಬೇರೆ ಯಾವುದಿದೆ ಹೇಳಿ?
ಇಡೀ ಸಮಾಜವೇ ಒಂದು ದೊಡ್ಡ ಪ್ರಯೋಗಶಾಲೆ. ಅದು ಕಲಿಸುವ ಜೀವನ ಪಾಠ ದೊಡ್ಡದು. ಆ ಪಾಠಕ್ಕೆ ಇಲ್ಲಿ ಸಾಣೆ ಹಿಡಿಯಲಾಗುತ್ತದೆ.
ಆಗಾಗ ಆಯೋಜಿಸುವ ಸಮಾವೇಶಗಳ ಮೂಲಕ ಗ್ರಾಮೀಣ ಹಿನ್ನೆಲೆಯಿಂದ ಬಂದ ಸಾವಿರಾರು ಅಭ್ಯರ್ಥಿಗಳ ವಿಶ್ವಾಸ ಮತ್ತು   ಮನೋವಿಕಾಸವನ್ನು ಸ್ಯಾಂಡ್ ಬಾಕ್ಸ್ಹೆಚ್ಚಿಸಿದೆ. ಸಾಮಾಜಿಕ ಉದ್ಯಮಶೀಲತೆ ಹಾಗೂ ಸ್ಥಳೀಯ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವ ಸೂಕ್ಷ್ಮಗಳನ್ನು ನಾವು ಅವರಿಗೆ ಕಲಿಸಿಕೊಡುತ್ತೇವೆ.
ಮನಸ್ಸಿನಲ್ಲಿರುವ ಆಲೋಚನೆಗಳನ್ನು ಮೊದಲು ಸಣ್ಣ ಪ್ರಮಾಣ ದಲ್ಲಿ ಅನುಷ್ಠಾನಗೊಳಿಸಲು ಯತ್ನಿಸಿ ಅದರಲ್ಲಿ ಯಶಸ್ವಿಯಾದ ಬಳಿಕ ದೊಡ್ಡ ಪ್ರಮಾಣದ ಯೋಜನೆಗಳಿಗೆ ಕೈ ಹಾಕಿ ಎಂಬ ಮಂತ್ರ ಹೇಳಿಕೊಟ್ಟಿದ್ದೇವೆ.
*ಇದರ ಹೊರತಾಗಿ ನಿಮ್ಮ ಪ್ರತಿಷ್ಠಾನದಿಂದ ಬೇರೆ ಯಾವ ಚಟುವಟಿಕೆ ನಡೆಯುತ್ತಿವೆ?
ಔದ್ಯೋಗಿಕ ಅವಕಾಶ, ಸಿಕ್ಕ ಅವಕಾಶಗಳ ಸದುಪಯೋಗ, ಸಾರ್ವಜನಿಕ ಸಂಪರ್ಕ ಮತ್ತು ವ್ಯವಹಾರ ಕೌಶಲ, ಸಾರ್ವಜನಿಕ ಆಡಳಿತ, ಸಮುದಾಯ ಅಭಿವೃದ್ಧಿ, ಕಂಪ್ಯೂಟರ್‌ ತರಬೇತಿ ಜತೆ ನಾಯಕತ್ವ, ವ್ಯಕ್ತಿತ್ವ ವಿಕಸನ, ತಂಡ ಕಟ್ಟುವ ಜವಾಬ್ದಾರಿ ಮತ್ತು ಪ್ರತ್ಯಕ್ಷ ಕಲಿಕೆಯ ಅವಕಾಶ ಕಲ್ಪಿಸಿದ್ದೇವೆ. ನಮ್ಮಲ್ಲಿ ತರಬೇತಿ ಪಡೆದವರ ಸಾಮರ್ಥ್ಯ, ಬಿ.ಕಾಂ ಪದವೀಧರರು, ಎಂ.ಬಿ.ಎ ಪದವೀಧರರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ.
ಫೆಲೊಷಿಪ್‌ ಜತೆಗೆ ಐದಾರು ತಿಂಗಳ ತರಬೇತಿಗೆ ತಗಲುವ ವೆಚ್ಚಕ್ಕಾಗಿ ಸಾಲ ನೀಡುವ ಯೋಜನೆ ನಮ್ಮಲ್ಲಿದೆ.  ಅಭ್ಯರ್ಥಿ ನೌಕರಿಗೆ ಸೇರಿದ ನಂತರ ಈಸಾಲವನ್ನು ಮರು ಪಾವತಿಸಬೇಕಾಗುತ್ತದೆ. ನಮ್ಮಲ್ಲಿ ತರಬೇತಿ ಪಡೆದ ಅದೆಷ್ಟೋಯುವಕರು ಸಾಮಾಜಿಕ ಕಾರ್ಯವನ್ನೇ ಉದ್ಯಮವನ್ನಾಗಿಸಿಕೊಂಡಿದ್ದಾರೆ.
* ಬೇರೆ ಸಂಸ್ಥೆಗಳು ಸಹಯೋಗವಿದೆಯಾ?
ಬೇರೆ ಬೇರೆ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ, ಕೃಷಿ, ನವೋದ್ಯಮಿ, ಅಗಸ್ತ್ಯ ಹೀಗೆ ವಿಭಿನ್ನ ಯೋಜನೆಗಳನ್ನು ರೂಪಿಸಲಾಗಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳಿಗೂ ನೆರವು ನೀಡುತ್ತಿದ್ದೇವೆ.  
ಅಗಸ್ತ್ಯ ಎಂಬ ಸ್ವಯಂ ಸೇವಾ ಸಂಸ್ಥೆ ಸಂಚಾರಿ ವಿಜ್ಞಾನ ಪ್ರಯೋಗಾಲಯದ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಮೂಡಿಸುತ್ತಿದೆ. ಹುಬ್ಬಳ್ಳಿಧಾರವಾಡದಲ್ಲಿ ಯಶಸ್ವಿಯಾಗಿರುವ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಯೋಚನೆ ಇದೆ.
ಸೂಕ್ತ ಮಾರ್ಗದರ್ಶನದ ಜತೆ ಕಳೆದ ಐದಾರು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆಯೋಜಿಸುತ್ತಿರುವ ಅಭಿವೃದ್ಧಿ ಸಂವಾದನವೋದ್ಯಮಿಗಳಿಗೆ ಬಹಳವಾಗಿ ನೆರವಾಗಿದೆ.
ಅಂತರರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಖಾಸಗಿ ಉದ್ಯಮಗಳ ದಿಗ್ಗಜರು, ವೃತ್ತಿಪರರು  ನವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕೌಶಲ ವಿನಿಮಯಕ್ಕಾಗಿ ದೇಶವಿದೇಶಗಳ 40 ಪ್ರತಿಷ್ಠಿತ ವಿಶ್ವವಿದ್ಯಾಲಯ ಗಳ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ.
ದೇಶಪಾಂಡೆ ಪ್ರತಿಷ್ಠಾನ ಸಾಮಾಜಿಕ ಬದಲಾವಣೆಗೆ ಕಾರಣ ವಾಗುವ ಅನೇಕ ಸಂಘಟನೆಗಳ ಜತೆ ಕೆಲಸ ಮಾಡುತ್ತಿದೆ.  ಸ್ಯಾಂಡ್‌ಬಾಕ್ಸ್‌ನಿಂದ ಅನೇಕ ಕಂಪೆನಿಗಳು ಸೃಷ್ಟಿಯಾಗಿವೆ.
*ಕೃಷಿ ಮತ್ತು ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿವೆ?
ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ದೊರೆಯದ ಶಿಕ್ಷಣ ರೈತರಿಂದ ಸಿಗುತ್ತದೆ. ಕೃಷಿಗ್ರಾಮೀಣಾಭಿವೃದ ಸುಧಾರಣೆಗೆ ಹಲವು ಯೋಜನೆಗಳಿವೆ. ಸಾಮಾಜಿಕ ಕಾರ್ಯಕರ್ತರ ಜತೆ ರೈತರಿಗೆ ವೇದಿಕೆ ಕಲ್ಪಿಸುವ ಕೆಲಸ ನಮ್ಮದು.
ಜಾಗತಿಕ ಮಟ್ಟದಲ್ಲಿ ಕೃಷಿ ಕ್ಷೇತ್ರದಲ್ಲಿ ನಡೆಯು ತ್ತಿರುವ ಆವಿಷ್ಕಾರ ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ರೈತರಿಗೆ ತರಬೇತಿ ನೀಡಲು ಕೃಷಿಎಂಬ ಯೋಜನೆ ರೂಪಿಸಿದ್ದೇವೆ.
ಈಗಾಗಲೇ 500ಕ್ಕೂ ಹೆಚ್ಚು ಕೃಷಿಕರಿಗೆ ತರಬೇತಿ ನೀಡಿದ್ದೇವೆ. ರೈತರಿಗಾಗಿ ಪ್ರತ್ಯೇಕ ಶಾಲೆ ಸ್ಥಾಪಿಸಲು 50 ಎಕೆರೆ ಜಾಗ ಖರೀದಿಸಿದ್ದೇವೆ. ಇಲ್ಲಿ ಕಲಿಕೆಗಿಂತ ಪ್ರಯೋಗಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.  
* ನಿಮ್ಮ ಕಾರ್ಯಕ್ರಮಗಳ ವಿಶೇಷತೆ ಏನು?
ಅತಿ ಸಣ್ಣಪುಟ್ಟ ಸರಳ ಉಪಾಯಗಳಿಂದ ದೊಡ್ಡ ಪರಿಣಾಮಗಳನ್ನು ಕಂಡುಕೊಳ್ಳುವುದು ಹೇಗೆ ಎಂಬ  ತಂತ್ರವನ್ನು ಅವರಿಗೆ ಕಲಿಸುತ್ತೇವೆ.
ವಿದೇಶಿ ಸ್ವಯಂಸೇವಾ ಸಂಸ್ಥೆಗಳು, ಸರ್ಕಾರಗಳು ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ನೆರವು ನೀಡಲು ತಯಾರಿವೆ. ಸಂಪರ್ಕ ಕೊರತೆಯಿಂದಾಗಿ ಆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ.
ಇಂತಹ ಸಂದರ್ಭಗಳಲ್ಲಿ ಸ್ಯಾಂಡ್‌ಬಾಕ್ಸ್ ಕೊಂಡಿಯಂತೆ ಕೆಲಸ ಮಾಡುತ್ತದೆ. ಸಾಮಾಜಿಕ ಬದಲಾವಣೆ ತರುವ ಪ್ರಯೋಗಗಳಿಗೆ ಸದಾ  ಉತ್ತೇಜನ ನೀಡುತ್ತೇವೆ.
* ಏನಾದರೂ ಬದಲಾವಣೆ ಗೋಚರಿಸಿದೆಯೇ?
ನಾವು ಆಯೋಜಿಸುವ ಕೃಷಿ ಸಿಂಚನ, ಯುವ ಶೃಂಗಸಭೆ, ಅಭಿವೃದ್ಧಿ ಸಂವಾದ ಸಮ್ಮೇಳನಗಳಿಗೆ ಭಾರಿ ಸ್ಪಂದನೆ ಸಿಕ್ಕಿದೆ. ಎರಡು ಸಾವಿರ  ರೈತರು ಕೃಷಿ ಸಿಂಚನ' ಕಾರ್ಯಕ್ರಮ ಭಾಗವಹಿಸಿದ್ದರು.
ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಈ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಪೈಪೋಟಿ ಒಡ್ಡಿ ಮೇಲುಗೈ ಸಾಧಿಸಿದ್ದಾರೆ. ಕಲಘಟಗಿಯ ವಿದ್ಯಾರ್ಥಿಗಳು ದೆಹಲಿಗೆ ಹೋಗಿ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿದ್ದಾರೆ.
ನಮ್ಮ ಶಾಲೆಗಳಲ್ಲಿ ಕೇವಲ ಒಬ್ಬ ಅಥವಾ ಇಬ್ಬರು ಜಾಣ ವಿದ್ಯಾರ್ಥಿಗಳ ಮೇಲೆ ಮಾತ್ರ ಗಮನ ಹರಿಸುತ್ತಾರೆ. ನಾವು ಅದನ್ನು ಸರಿಪಡಿಸಲು ಯತ್ನಿಸಿದ್ದೇವೆ. ನಮ್ಮ ಮಧ್ಯಸ್ಥಿಕೆಯ ಕಾರಣ ಉತ್ತಮ ಬದಲಾವಣೆ  ಮತ್ತು ಫಲಿತಾಂಶ ಕಾಣಿಸಿಕೊಂಡಿದೆ.
ನಮ್ಮಲ್ಲಿ ತರಬೇತಿ ಪಡೆದವರೊಬ್ಬರು, ಚಕ್ಕಡಿಗಳಿಗೆ ಬ್ರೇಕ್‌ ಅಭಿವೃದ್ಧಿಪಡಿಸಿದ್ದಾರೆ. ಅಡಿಕೆ ಸುಲಿಯುವ ಯಂತ್ರ, ಶುದ್ಧ ಕುಡಿಯುವ ನೀರಿನ ಘಟಕ, ತೆಂಗು ಸುಲಿಯುವ ಸಾಧನದಂತಹ ಸಮಾಜಕ್ಕೆ, ರೈತರಿಗೆ ಉಪಯೋಗವಾಗುವ ಸಂಶೋಧನೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ.
ಜತೆಗೆ ಅವರಲ್ಲಿ ಸಾಮಾಜಿಕ ಪ್ರಜ್ಞೆಯನ್ನೂ ಬೆಳೆಸುತ್ತೇವೆ. ಜನರಿಗೆ ಅಗತ್ಯವಾದ ವಸ್ತುಗಳನ್ನು ಸಂಶೋಧಿಸಿ ಉತ್ಪಾದನೆಯಲ್ಲಿ ತೊಡಗಿದರೆ  ಯಶಸ್ಸಿನ ಜೊತೆಗೆ ನಿರುದ್ಯೋಗ ಸಮಸ್ಯೆಯೂ  ನಿವಾರಣೆಯಾಗುತ್ತದೆ.
ನಮ್ಮಲ್ಲಿ ತರಬೇತಿ ಪಡೆದ ಯುವಕನೊಬ್ಬ ತನ್ನ ಗ್ರಾಮದ ಬತ್ತಿದ ಕೊಳವೆ ಬಾವಿಗಳ ಮರು ಪೂರಣ ಮಾಡಿದ್ದಾನೆ.  ಮಣ್ಣಿನ ಆರೋಗ್ಯ, ಬೆಳೆ ಮತ್ತು ನೀರು ನಿರ್ವಹಣೆ ಬಗ್ಗೆ 12 ಸಾವಿರ ರೈತರಿಗೆ ತರಬೇತಿ ನೀಡುವ ಗುರಿ ಹೊಂದಿದ್ದೇವೆ.
ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರವೂ ಇರುತ್ತದೆ. ತಮ್ಮ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸೃಜನಶೀಲ ಮತ್ತು ಕ್ರಿಯಾಶೀಲ ಮನಸ್ಸುಗಳಿಗೆ ನಾವು ವೇದಿಕೆ ನೀಡುತ್ತೇವೆ
ಗುರುರಾಜ ದೇಶಪಾಂಡೆ


No comments: